“ಈ ಬಾರಿ ಶೇಂಗಾ ಬೆಳೆಗೆ ಒಂದೇ ಒಂದು ಹುಳು ಇಲ್ಲ, ರೋಗಗಳಿಲ್ಲ. ಖರ್ಚು ಬಹಳ ಕಡಿಮೆಯಾಗಿದೆ. ಇದೇ ರೀತಿ ಎಲ್ಲ ಬೆಳೆಯೂ ಬಂದರೆ ರೈತರು ಚೆನ್ನಾಗಿರ್ತಾರೆ ನೋಡಿ” ಎಂದು ಯಾದಗಿರಿ ಜಿಲ್ಲೆ, ಶಹಾಪೂರ್ ತಾಲ್ಲೂಕು ಗಂಗನಾಳ್ ಗ್ರಾಮದ ಕೃಷಿಕ ಶರಣು ಹರ್ಷ ವ್ಯಕ್ತಪಡಿಸಿದರು.
ಒಂದು ಬೆಳೆ ತೆಗೆದುಕೊಂಡ ನಂತರ ಮತ್ತೆ ಮುಂದಿನ ಬಾರಿಯೂ ಅದೇ ಬೆಳೆ ಹಾಕುವುದಿಲ್ಲ. ಬೆಳೆ ಪರಿವರ್ತನೆ ಮಾಡುತ್ತೇವೆ. ಎರಡೂವರೆ ತಿಂಗಳ ಹಿಂದೆ ಶೇಂಗಾ ಬಿತ್ತಿದ್ದೆವು. ಬಿಜಾಪುರದಿಂದ 3 ಕ್ವಿಂಟಾಲ್, 30 ಕೆಜಿ ಬಿತ್ತನೆಬೀಜ ತಂದೆವು. ಈ ಭಾರಿ ಒಂದು ಕ್ವಿಂಟಾಲ್ ಬಿತ್ತನೆಬೀಜಕ್ಕೆ 12 ಸಾವಿರ ಚಿಲ್ರೆ ಆಗಿದೆ. ಯಾವವರ್ಷವೂ ಇಷ್ಟು ರೇಟು ಆಗಿರಲಿಲ್ಲ. ಹೋದವರ್ಷ, ಅದರ ಹಿಂದಿನ ವರ್ಷವೂ ಬೆಲೆ ಕಡಿಮೆ ಇತ್ತು ಎಂದು ವಿವರಿಸಿದರು ಶರಣು.

ಈ ಬಾರಿ ಮೂರು ಎಕರೆಗೆ ಶೇಂಗಾ ಬಿತ್ತಿದ್ದೇವೆ. ಒಂದು ಎಕರೆಗೆ ಒಂದು ಕ್ವಿಂಟಾಲ್ 10 ಕೆಜಿ ಬಿತ್ತನೆಬೀಜ ಬೇಕು. ಬಿತ್ತನೆ ಮಾಡುವುದಕ್ಕೂ ಮೊದಲು ಹೊಲವನ್ನು ಎರಡು ಬಾರಿ ಚೆನ್ನಾಗಿ ಉತ್ತು 9 ಗಾಡಿ ಕೊಟ್ಟಿಗೆ ಗೊಬ್ಬರ ಹಾಕಿದೆವು. ಈ ಬಳಿಕ ಮತ್ತೆ ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರ ಮಣ್ಣಿನಲ್ಲಿ ಮಿಶ್ರಣವಾಗುವಂತೆ ಮಾಡಿದೆವು. ಸಾಲುಗಳನ್ನು ಮಾಡಿಕೊಂಡು ಬಿತ್ತನೆ ಮಾಡಿದ್ದೇವೆ. ಈಗಾಗಲೇ ಐದು ಚೀಲ ಜಿಪ್ಸಂ ಕೊಟ್ಟಿದ್ದೇವೆ ಎನ್ನುತ್ತಾರೆ.
ಬಿತ್ತನೆ ಮಾಡಿ ಒಂದು, ಒಂದೂವರೆ ತಿಂಗಳು ಕಳೆಯುವಷ್ಟರಲ್ಲಿ ಚುಕ್ಕೆರೋಗ ಖಾಯಂ ಅನ್ನುವಂತೆ ಬರುತ್ತಿತ್ತು. ಈ ಬಾರಿ ಚುಕ್ಕಿರೋಗವಾಗಲಿ, ಬೇರೆ ಯಾವುದೇ ರೋಗವೂ ಬಂದಿಲ್ಲ. ಇಂಥ ರೋಗಗಳು ಬಂದ್ರೆ ಔಷ್ಧಿ (ರಾಸಾಯನಿಕ ಕೀಟನಾಶಕ) ತಂದು ಹೊಡಿಯಬೇಕು. ಹುಳಪಳ ಬಂದ್ರೆ ಅದಕ್ಕೆ ಬೇರೆ ಔಷ್ದಿ ಹೊಡೀಬೇಕು. ಇವಕ್ಕೆಲ್ಲ ಭಾರಿ ಖರ್ಚು ಆಗ್ತದೆ. ರೈತ್ರಿಗೆ ಬರೋ ಚೂರುಪಾರು ಲಾಭವೂ ಅಲ್ಲೇ ಹೊರಟು ಹೋಗುತ್ತದೆ ಎಂದು ವಿವರಿಸಿದರು.
ಶೇಂಗಾಬೆಳೆ ಕೀಟ-ಕೀಟಗಳ ಹಾವಳಿಯಿಂದ ಮುಕ್ತವಾಗಿದೆ ಎಂಬ ಮಾತು ಕೇಳಿದ ತಕ್ಷಣ ನನಗೆ ಅಚ್ಚರಿ. ಅರೇ ಇದ್ಯಾಗೆ ಸಾಧ್ಯವಾಗಿದೆ ಎಂದುಕೊಂಡೆ. ಇದಕ್ಕೆ ಕಾರಣವೇನು ಎಂದು ಕೇಳಿದಾಗ ಅವ್ರು ಬ್ಯಾರಿಕ್ಸ್ ಸಂಸ್ಥೆ ಪ್ರತಿನಿಧಿ ಹೊಲಕ್ಕೆ ಬಂದು ಕಂಟ್ರೋಲ್ ಸಿಂಪಡಣೆ ಮಾಡಿ ಎಂದಿದ್ದರು. ಈ ಮುಂಚೆ ಸಿಂಪಡಣೆ ಮಾಡಿದ್ದ ಕೃಷಿಕರ ಹೊಲಗಳ ವಿಡಿಯೋಗಳನ್ನು ತೋರಿಸಿದ್ರು. ಆ ನಂಬಿಕೆ ಮೇರೆಗೆ ಇದೂವರೆಗೆ ಎರಡು ಬಾರಿ ಬ್ಯಾರಿಕ್ಸ್ ಕಂಟ್ರೋಲ್ ಸಿಂಪಡಣೆ ಮಾಡಿದ್ದೀನಿ. ಅವ್ರು ಇದನ್ನು ಸಿಂಪಡಣೆ ಮಾಡಿದ್ರೆ ಶೇಂಗಾ ಸಸ್ಯಕ್ಕೆ ರೋಗ ನಿರೋಧಕ, ಕೀಟ ನಿರೋಧಕ ಶಕ್ತಿ ಜಾಸ್ತಿಯಾಗುತ್ತೆ ಅಂದಿದ್ರು. ಅವ್ರ ಮಾತು ದಿಟ ನೋಡಿ ಎಂದು ಮತ್ತೆ ಹೊಲದತ್ತ ಕೈ ತೋರಿದರು.
ಡಿಸೆಂಬರ್ ಕೊನೆ ಅಥವಾ ಜನವರಿ ಮೊದಲನೇ ವಾರಕ್ಕೆ ಶೇಂಗಾ ಕೊಯ್ಲಾಗುತ್ತೆ. ಈಗ ಬೆಳೆ ಇರುವ ರೀತಿ ನೋಡಿದ್ರೆ ಎಕರೆಗೆ ಕನಿಷ್ಟ 30 ( ಒಂದು ಕ್ವಿಂಟಾಲ್ ಶೇಂಗಾ ಹಿಡಿಸುವ ಚೀಲ) ಚೀಲ, ಮೂರು ಎಕರೆಗೆ ಕನಿಷ್ಟ 90 ಚೀಲ ಶೇಂಗಾ ಇಳುವರಿ ಬರುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.
ನೀರಾವರಿ ಆಶ್ರಿತ ಹೊಲ. ಬೆಳೆಗೆ ನೀರು ಅವಶ್ಯಕತೆ ಎನ್ನುವಾಗಷ್ಟೆ ನೀರು ಹಾಯಿಸುತ್ತಾರೆ. ಬೆಳೆ ಬೆಳೆದಂತೆ ಹೆಚ್ಚೆಚ್ಚು ನೀರು ಕೇಳುತ್ತದೆ. ಅವಶ್ಯಕವಿದ್ದಾಗ ಅವಶ್ಯಕವಿರುವಷ್ಟೆ ನೀರು ಕೊಟ್ಟರೆ ಕಾಳುಗಳು ಚೆನ್ನಾಗಿ ಕಟ್ಟುತ್ತವೆ. ಇದರ ಪರಿಣಾಮ ಇಳುವರಿಯೂ ಉತ್ತಮವಾಗಿರುತ್ತದೆ. ಈಗೆಲ್ಲ ಕೊಯ್ಲುಕಾರ್ಯ ಮೇಶಿನ್ ಮುಖಾಂತರವೇ ನಡೆಯುವುದರಿಂದ ಕೆಲಸ ಬೇಗ ನಡೆಯುತ್ತದೆ. ಸೊಪ್ಪುಬೇರೆ, ಕಾಳು ಬೇರೆ, ಕಾಳುಗಳಲ್ಲಿಯೂ ಚೆನ್ನಾಗಿರುವ, ಜಳ್ಳಾಗಿರುವ ಕಾಳುಗಳು ಬೇರೆಬೇರೆಯಾಗಿ ಬರುತ್ತವೆ. ಇದರಿಂದ ಬೇಗ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಅನುಕೂಲ. ಚೆನ್ನಾಗಿರುವ ಕಾಳುಗಳನ್ನೇ ತೆಗೆದುಕೊಂಡು ಹೋಗುವುದರಿಂದ ಉತ್ತಮ ಬೆಲೆಯೂ ದೊರಕುತ್ತದೆ ಎನ್ನುತ್ತಾರೆ.


ನಮ್ಮ ಬೇರೊಂದು ಹೊಲಕ್ಕೆ ಹತ್ತಿ ಹಾಕಿದ್ದೇವೆ. ಅದರಲ್ಲಿ ಈಗಾಗಲೇ ಮುಕ್ಕಾಲು ಭಾಗದಷ್ಟು ಹತ್ತಿ ಬಿಡಿಸಿಕೊಂಡಿದ್ದೇವೆ. ಈ ಬಾರಿ ಶೇಂಗಾ ಉತ್ತಮವಾಗಿ ಬರುತ್ತಿರುವುದನ್ನು ನೋಡಿ ಅಲ್ಲಿಗೂ ಶೇಂಗಾವನ್ನೇ ಬಿತ್ತನೆ ಮಾಡಬೇಕು ಎಂದು ಮಾಡಿದ್ದೆವು. ಆದರೆ ಇದರ ಬಿತ್ತನೆಬೀಜದ ದುಬಾರಿ ದರ ನೋಡಿ ತುಸು ಹಿಂದೆಮುಂದೆ ನೋಡುವಂತಾಗಿದೆ ಎನ್ನುತ್ತಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9972394005

LEAVE A REPLY

Please enter your comment!
Please enter your name here