ಸಿರಿಧಾನ್ಯ: ಭಾರತದಲ್ಲಿ ಆಹಾರ ಭದ್ರತೆಗೆ ಮಾರ್ಗವೇ

0
ಲೇಖಕರು: ಚಾರು ಬಹ್ರಿ

ಬರ (Drought) ಮತ್ತು ಶಾಖ (temperature) ವನ್ನು ತಡೆದುಕೊಳ್ಳುವ ಪೋಷಕಾಂಶ; ಸಮೃದ್ಧ ಧಾನ್ಯವಾಗಿ, ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದ ನಡುವೆ ಭಾರತದಾದ್ಯಂತ ಸಿರಿಧಾನ್ಯ(Millets)ಗಳನ್ನು ಪ್ರಚಾರ ಮಾಡಲಾಗುತ್ತಿದೆ . ಆದರೆ ಸರ್ಕಾರದ ಪ್ರಚಾರದ ಪ್ರಯತ್ನಗಳ ಹೊರತಾಗಿಯೂ, ಬೇಡಿಕೆ ಕಡಿಮೆಯಾಗಿದೆ

ಭಾರತ (India) ದಲ್ಲಿ ಮತ್ತು ಪ್ರಪಂಚದಾದ್ಯಂತದ ಭಾರತೀಯ ರಾಯಭಾರ ಕಚೇರಿಗಳ ಮೂಲಕ ಹವಾಮಾನ ಸ್ನೇಹಿ, ಬರ ನಿರೋಧಕ ಬೆಳೆ ಸಿರಿಧಾನ್ಯಗಳ ಬೇಡಿಕೆ ಹೆಚ್ಚಿಸಲು ಭಾರತ ಸರ್ಕಾರವು ಮಹತ್ವದ ಪ್ರಯತ್ನವನ್ನು ಮಾಡುತ್ತಿದೆ.

ಆ ಪ್ರಯತ್ನವನ್ನು ಜಾಗತಿಕವಾಗಿ ಗುರುತಿಸಲಾಗುತ್ತಿದೆ. ಭಾರತದ ಪ್ರಸ್ತಾಪದ ನಂತರ, ಜನವರಿಯಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ (International Millets Year) ಗಳ ವರ್ಷವೆಂದು ಘೋಷಿಸಿತು. ಜೂನ್ನಲ್ಲಿ, ಮ್ಯಾರಿನೇಡ್ ಸಿರಿಧಾನ್ಯ ಸಲಾಡ್ ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವೈಟ್ ಹೌಸ್ ರಾಜ್ಯ ಭೋಜನದ ಮೆನುವಿನಲ್ಲಿ ಸೇರಿಸಲಾಯಿತು, ಈ ವರ್ಷ ಭಾರತದಲ್ಲಿ ನಡೆದ ಪ್ರತಿ G20 ಸಭೆಯಲ್ಲಿ ಸಿರಿಧಾನ್ಯಗಳನ್ನು ನೀಡಲಾಯಿತು.

ಸಿರಿಧಾನ್ಯ ಎಂದರೇನು?
ಸಿರಿಧಾನ್ಯಗಳಲ್ಲಿ ರಾಗಿ, ನವಣೆ, ಸಜ್ಜೆ, ಆರ್ಕ, ಸಾಮೆ ಒಳಗೊಳ್ಳುತ್ತವೆ. ಇವುಗಳಲ್ಲಿ ಪ್ರಧಾನವಾಗಿ ರಾಗಿ ನಂತರ ನವಣೆಯನ್ನು ಕೃಷಿ ಮಾಡಲಾಗುತ್ತಿದೆ. ಸಿರಿಧಾನ್ಯ ಉತ್ತೇಜಿಸುವ ಪ್ರಯತ್ನವು 2018 ರಲ್ಲಿ ಪ್ರಾರಂಭವಾಯಿತು, ಇದನ್ನು ಭಾರತವು ರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿತು. ಆ ವರ್ಷ, ದೇಶವು ಗೋಧಿ ಮತ್ತು ಅಕ್ಕಿಗೆ ಹೋಲಿಸಿದರೆ ಅದರ ಹೆಚ್ಚಿನ ಪೋಷಕಾಂಶದ ಅಂಶಕ್ಕಾಗಿ ಧಾನ್ಯವನ್ನು ‘ಪೌಷ್ಟಿಕ-ಧಾನ್ಯ’ ಎಂದು ಮರುನಾಮಕರಣ ಮಾಡಿತು.

ಭವಿಷ್ಯದ ಸೂಪರ್ಫುಡ್ ಎಂದು ಸರ್ಕಾರವು ಸಿರಿಧಾನ್ಯವನ್ನು ಉತ್ತೇಜಿಸಿದರೂ, ಬೇಡಿಕೆ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ಬರ-ನಿರೋಧಕ ಬೆಳೆಯನ್ನು ಉತ್ಪಾದಿಸಲು ಮತ್ತು ಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

1960 ರ ದಶಕದ ಮೊದಲು, ಸಿರಿಧಾನ್ಯ ಭಾರತೀಯ ಆಹಾರದಲ್ಲಿ ಪ್ರಧಾನವಾಗಿತ್ತು. ಕೃಷಿ ನೀತಿ ವಿಶ್ಲೇಷಕರಾದ ದೇವಿಂದರ್ ಶರ್ಮಾ ಅವರು ಸಿರಿಧಾನ್ಯಗಳಿಗೆ ಇಂದಿನ ಕಡಿಮೆ ಬೇಡಿಕೆಯ ಬೇರುಗಳನ್ನು 1960 ರ ದಶಕದಲ್ಲಿ ಪ್ರಾರಂಭವಾದ ಭಾರತದ ಹಸಿರು ಕ್ರಾಂತಿಯಿಂದ ಗುರುತಿಸುತ್ತಾರೆ, ಈ ಸಮಯದಲ್ಲಿ ದೇಶದ ಕೃಷಿ ಪದ್ಧತಿಗಳಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಲಾಯಿತು. “ಅನೇಕ ರೈತರು ಗೋಧಿ, ಜೋಳ, ಅಕ್ಕಿ ಮತ್ತು ಇತರ ಬೆಳೆಗಳ ಹೆಚ್ಚಿನ ಇಳುವರಿ ಹೈಬ್ರಿಡ್ ತಳಿಗಳನ್ನು ಬೆಳೆಯಲು ಸಿರಿಧಾನ್ಯಗಳನ್ನು ಕೃಷಿ ಮಾಡುವುದನ್ನು ಬಿಟ್ಟರು “ಎಂದು ಶರ್ಮಾ ಹೇಳುತ್ತಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ನ ನಿರ್ದೇಶಕಿ ಸಿ ತಾರಾ ಸತ್ಯವತಿ, “ಸ್ವಾತಂತ್ರ್ಯದ ಸಮಯದಲ್ಲಿ [1947 ರಲ್ಲಿ] ಭಾರತವು ಆಹಾರ ಭದ್ರತೆ ಹೊಂದಿರದ ಕಾರಣ ಆಹಾರ ಭದ್ರತೆಯನ್ನು ಸಾಧಿಸಲು, ಕೇಂದ್ರ ಸರ್ಕಾರವು ಗೋಧಿ ಮತ್ತು ಅಕ್ಕಿಯ ಕೃಷಿಗೆ ಆದ್ಯತೆ ನೀಡಿತು ಜೊತೆಗೆ ಸಂಪೂರ್ಣ ಬೆಂಬಲಿಸಿತು” ಎಂದು ಹೇಳುತ್ತಾರೆ

1960 ಮತ್ತು 2022 ರ ನಡುವೆ, ಭಾರತದಲ್ಲಿ ಸಿರಿಧಾನ್ಯ ವಾರ್ಷಿಕ ತಲಾ ಬಳಕೆಯು 30.94 ಕೆಜಿಯಿಂದ 3.87 ಕೆಜಿಗೆ ಕುಸಿಯಿತು, ಏಕೆಂದರೆ ಜನರು ಹೆಚ್ಚಾಗಿ ಗೋಧಿ ಮತ್ತು ಅಕ್ಕಿಯನ್ನು ಸೇವಿಸಲು ಆರಂಭಿಸಿದ್ದರು. ಗೋಧಿ ಮತ್ತು ಬಿಳಿ ಅಕ್ಕಿಗೆ ಹೋಲಿಸಿದರೆ ಅನೇಕರು, ಹೆಚ್ಚಾಗಿ ಯುವ ಭಾರತೀಯರು ಸಿರಿಧಾನ್ಯ ರುಚಿಯತ್ತ ಆಕರ್ಷಿತರಾಗಿಲ್ಲ.

ಇದಕ್ಕಾಗಿ ಕೆಲವರು ಭಾರತದ ಸಾರ್ವಜನಿಕ ಆಹಾರ ಧಾನ್ಯ ವಿತರಣಾ ವ್ಯವಸ್ಥೆ (PDS) ಯೋಜನೆಯನ್ನು ದೂಷಿಸುತ್ತಾರೆ, ಇದು ಅರ್ಹ ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಪ್ರತಿ ತಿಂಗಳು ಉಚಿತ ಅಕ್ಕಿ ಅಥವಾ ಗೋಧಿಯನ್ನು ಒದಗಿಸುತ್ತದೆ, ಆ ಧಾನ್ಯಗಳಿಗೆ ಆದ್ಯತೆ ನೀಡಲು ಕಾರಣವಾದ “ಅಕ್ಕಿ-ಗೋಧಿ ಕೇಂದ್ರಿತ ನೀತಿಗಳನ್ನುಶಾಶ್ವತಗೊಳಿಸುವುದಕ್ಕಾಗಿ. (ಹತ್ತು ಮಂದಿ ಭಾರತೀಯರಲ್ಲಿ ಆರು ಮಂದಿ ಈ ವ್ಯವಸ್ಥೆಯ ಮೂಲಕ ವಿತರಿಸಲಾದ ಉಚಿತ ಧಾನ್ಯವನ್ನು ಸೇವಿಸುತ್ತಾರೆ.)

ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಆಂಟಿಆಕ್ಸಿಡೆಂಟ್ಗಳು ಮತ್ತು ಪ್ರಿಬಯಾಟಿಕ್ಗಳಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪ್ಯಾಕ್ ಮಾಡಿದ್ದರೂ ಸಹ, ಸತ್ಯವತಿ ಪ್ರಕಾರ, “ಕರೋನ ವೈರಸ್ ನಂಥ ಸಾಂಕ್ರಾಮಿಕ ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳತ್ತ ಗಮನ ಸೆಳೆಯುವವರೆಗೂ ಸಿರಿಧಾನ್ಯ ಸೇವಿಸುವವರ ಸಂಖ್ಯೆ ಕಡಿಮೆಯಿತ್ತು. ಆ ಅವಧಿಯಲ್ಲಿ ಈ ಸಿರಿಧಾನ್ಯಗಳ ಬೇಡಿಕೆ ಹೆಚ್ಚಿದ್ದರೂ ನಂತರ ಧಾನ್ಯಕ್ಕೆ ಒಟ್ಟಾರೆ ಬೇಡಿಕೆ ಕಡಿಮೆಯಾಗಿದೆ.

ಹವಾಮಾನ ಬದಲಾವಣೆಯ ಪರಿಣಾಮ (Impact of climate change)ಗಳನ್ನು ತಡೆದುಕೊಳ್ಳುವಿಕೆ
21ನೇ ಶತಮಾನದ ಅವಧಿಯಲ್ಲಿ ಜಾಗತಿಕ ತಾಪಮಾನವು 2 ಡಿಗ್ರಿ ಸೆಲ್ಸಿಯಸ್ಗಳಷ್ಟು ಹೆಚ್ಚಾಗುವ ಗಣನೀಯ ಸಾಧ್ಯತೆ ಇದೆ ಎಂದು ಅಧ್ಯಯನಗಳು ತೋರಿಸಿವೆ. ಬರ ಮತ್ತು ಶಾಖದ ಅಲೆಗಳು ಎರಡು ತೀವ್ರ ಹವಾಮಾನ ವೈಪರೀತ್ಯ ಘಟನೆಗಳಾಗಿವೆ, ಇದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಹೆಚ್ಚಿನ ಆವರ್ತನದೊಂದಿಗೆ ಸಂಭವಿಸುತ್ತದೆ.

ಇಂತಹ ಹವಾಮಾನದ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಸಾಧನವಾಗಿ, ಸುಸ್ಥಿರ ಕೃಷಿಗೆ ಪೂರಕವಾದ, ಕಡಿಮೆ ಒಳಸುರಿ ತೆಗೆದುಕೊಳ್ಳುವ ಧಾನ್ಯಗಳತ್ತ ಹೆಚ್ಚು ಗನ ಹರಿಸಲಾಗಿದೆ. ಅನೇಕ ರೈತರಿಗೆ, ಆ ಎಣಿಕೆಯಲ್ಲಿ ರಾಗಿಗೆ ಅಂಕಗಳು ಹೆಚ್ಚು. ಇದು ಮಳೆಯಾಶ್ರಿತ.  ಕೀಟನಾಶಕ ಮತ್ತು ರಸಗೊಬ್ಬರಗಳಂತಹ ಒಳಸುರಿಗಳ ಅಗತ್ಯವಿಲ್ಲದ ಕಡಿಮೆ ಹೂಡಿಕೆಯ ಬೆಳೆಯಾಗಿದೆ ಎಂದು ಉತ್ತರ ಭಾರತದ ಉತ್ತರಾಖಂಡದ ಹಳ್ಳಿಯೊಂದರಲ್ಲಿ ಒಂದು ಎಕರೆ ಜಮೀನಿನಲ್ಲಿ 30 ವರ್ಷಗಳಿಂದ ಬೆಳೆ ಬೆಳೆಯುತ್ತಿರುವ ಎಪ್ಪತ್ತರ ಹರೆಯದ ರೈತ ವಿಜಯ್ ಜರ್ಧರ್ ಹೇಳುತ್ತಾರೆ.

ರಾಗಿ, ಭಾರತ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳ ಸ್ಥಳೀಯ ಧಾನ್ಯವಾಗಿದ್ದು, ಹವಮಾನ ತಾಪಮಾನ ಏರಿಕೆಯಿಂದ ಉಂಟಾಗುವ ವಾತಾವರಣದ ವೈಪರೀತ್ಯಗಳನ್ನು ತಡೆದುಕೊಳ್ಳುವ ಶಕ್ತಿಶಾಲಿ ಬೆಳೆಯಾಗಿದೆ ಎಂದು ದೃಢಪಡಿಸುವ ಸಾಕಷ್ಟು ಸಂಶೋಧನೆಗಳಿವೆ. ಪ್ರಪಂಚದ ರಾಗಿ ಉತ್ಪಾದನೆಯ ಅರ್ಧದಷ್ಟು ಭಾಗವನ್ನು ಹೊಂದಿರುವ ಸಜ್ಜೆ ಇತ್ತೀಚಿನ ಅಧ್ಯಯನದ ಪ್ರಕಾರ, ಬರಗಾಲದಲ್ಲಿಯೂ ಬದುಕುವಂಥ ಆಳವಾದ ಬೇರಿನ ವ್ಯವಸ್ಥೆಯನ್ನು ಹೊಂದಿದೆ.

“ಬರಗಾಲದ ಸಮಯದಲ್ಲಿ ಸಸ್ಯವು ಕುಗ್ಗಿದರೂ, ಅದು ನೀರುಣಿಸಿದಾಗ ಅದು ಮರುಕಳಿಸುವ ಸಾಮರ್ಥ್ಯವನ್ನು ಉಳಿಸಿಕೊಂಡಿದೆ, ಇದು ವಿಳಂಬವಾದ ಮುಂಗಾರು ಪರಿಸ್ಥಿತಿಗಳಿಗೆ ಸೂಕ್ತವಾದ ಬೆಳೆಯಾಗಿದೆ” ಎಂದು ಅಂತರರಾಷ್ಟ್ರೀಯ ಬೆಳೆಗಳ ಪ್ರಧಾನ ವಿಜ್ಞಾನಿ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಶಾಲಂದರ್ ಕುಮಾರ್ ಹೇಳಿದ್ದಾರೆ .
ಬಳಕೆಯಾಗದ ಬೆಳೆಗಳ ಹವಾಮಾನ ಸೂಕ್ಷ್ಮತೆಯನ್ನು ನಿರ್ಣಯಿಸಲು ಚೌಕಟ್ಟನ್ನು ಅಭಿವೃದ್ಧಿಪಡಿಸಿದ 2023 ರ ಸಿಮ್ಯುಲೇಶನ್ ಅಧ್ಯಯನವು ತಾಪಮಾನದಲ್ಲಿ 2C ಹೆಚ್ಚಳದಿಂದ ಬಿಸಿ ವಾತಾವರಣ ಉಂಟಾದರೂ ಸಹ, ಬರ-ನಿರೋಧಕ ರಾಗಿಯ ಇಳುವರಿಯು ವಾಸ್ತವವಾಗಿ 5% ರಷ್ಟು ಹೆಚ್ಚಾಗುತ್ತದೆ ಎಂದು ತೋರಿಸಿದೆ.

ರಾಗಿ ಪೂರೈಕೆಯನ್ನು ಹೆಚ್ಚಿಸುವ ಮಾರ್ಗ?
ಗುಡ್ಡಗಾಡು ಪ್ರದೇಶಗಳಲ್ಲಿ ನೀರು ವೇಗವಾಗಿ ಬರಿದಾಗುತ್ತದೆ. ಉತ್ತರಾಖಂಡವು ಹಿಮಾಲಯದ ಗುಡ್ಡಗಾಡು ರಾಜ್ಯವಾಗಿದ್ದು, ಕೃಷಿ ಮತ್ತು ಪ್ರವಾಸೋದ್ಯಮದಿಂದ ಆರ್ಥಿಕತೆಯು ಪ್ರಾಬಲ್ಯ ಹೊಂದಿದೆ. ಇಲ್ಲಿ ರಾಗಿಯನ್ನು ಬೆಳೆಯಲಾಗುತ್ತಿದೆ. ಇದು 2020-2021ರಲ್ಲಿ ದೇಶದ ರಾಗಿಯ 7% ಮತ್ತು sAmey 20% ಅನ್ನು ಉತ್ಪಾದಿಸುತ್ತದೆ.

ಉತ್ತರಾಖಂಡ ಸರ್ಕಾರದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ (ಯೋಜನೆ) ದಿನೇಶ್ ಕುಮಾರ್, ಈ ಪ್ರಮಾಣ ರಾಜ್ಯದ ಗುಡ್ಡಗಾಡು ಪ್ರದೇಶಕ್ಕೆ ಕಡಿಮೆಯಾಗಿದೆ. ನಮ್ಮ ಪ್ರದೇಶದ [ಉತ್ತರಾಖಂಡ] ಸುಮಾರು ಶೇಕಡ 89 ಭಾಗ ನೀರಾವರಿ ಹೊಂದಿಲ್ಲ, ಭತ್ತ ಬೆಳೆಯಲು ಸಾಕಷ್ಟು ಮಳೆ ಬೇಕಾಗುತ್ತದೆ ಎನ್ನುತ್ತಾರೆ ಇಂಥ ಭೌಗೋಳಿಕ ಮತ್ತು ಹವಾಮಾನದ ಅನುಕೂಲಗಳ ಹೊರತಾಗಿಯೂ, ಉತ್ತರಾಖಂಡದಲ್ಲಿ ರಾಗಿ ಕೃಷಿಯು 2012 ಮತ್ತು 2020 ರ ನಡುವೆ 25% ರಷ್ಟು ಕುಸಿದಿದೆ.

ಸಿರಿಧಾನ್ಯಕ್ಕೆ ಉತ್ತೇಜನ ನೀಡಲು, ಉತ್ತರಾಖಂಡವು 2022 ರಲ್ಲಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಪರಿಚಯಿಸಿತು ಮತ್ತು ಈ ವರ್ಷದ ಆರಂಭದಲ್ಲಿ, ಸಿರಿಧಾನ್ಯಗಳ ಬೇಡಿಕೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ರಾಜ್ಯ ಸಿರಿಧಾನ್ಯ ಮಿಷನ್ ಅನ್ನು ಪ್ರಾರಂಭಿಸಿತು. ಆಸಕ್ತ ರೈತರಿಗೆ ಬೆಳೆಯ ಪ್ರಯೋಜನಗಳ ಬಗ್ಗೆ ತಿಳಿಸಲು ಇದು ನಾಲ್ಕು ದಿನಗಳ ಉತ್ಸವವನ್ನು ಸಹ ಒಳಗೊಂಡಿತ್ತು.

ಬೆಂಬಲ ಬೆಲೆಯು ರೈತರಿಗೆ ಅವರ ಬೆಳೆಗೆ ಒಂದು ನಿರ್ದಿಷ್ಟ ಮಟ್ಟದ ಆದಾಯವನ್ನು ಖಾತರಿಪಡಿಸುತ್ತದೆ. ಸರ್ಕಾರ ನಿಗದಿಪಡಿಸಿದ ಬೆಲೆಯು ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿದ್ದರೆ, ಹೆಚ್ಚಿನ ಆದಾಯದ ನಿರೀಕ್ಷೆಯು ಬೆಳೆ ಬೆಳೆಯಲು ರೈತರನ್ನು ಉತ್ತೇಜಿಸುತ್ತದೆ.

ಕಳೆದ ವರ್ಷದ ಕನಿಷ್ಠ ಬೆಂಬಲ ಬೆಲೆ ಪ್ರತಿ ಕೆಜಿ ರಾಗಿಗೆ ರೂ. 35.78 (USD 0.43) ಆಗಿತ್ತು, ಇದು ಸಾಮಾನ್ಯ ರೂ. 25-27 ಪ್ರತಿ ಕೆಜಿ ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿರುತ್ತದೆ ಎಂದು ದಿನೇಶ್ ಕುಮಾರ್ ಹೇಳುತ್ತಾರೆ. ಈ ವರ್ಷ, ಸರ್ಕಾರವು ಪ್ರತಿ ಕೆಜಿಗೆ ರೂ. 38.46 (USD 0.46) ನೀಡಲಿದೆ. ಇದು ಪ್ರತಿ ಕೆಜಿಗೆ ರೂ. 30 ರ ಮಾರುಕಟ್ಟೆ ದರಕ್ಕೆ ವಿರುದ್ಧವಾಗಿದೆ ಎಂದು ಉತ್ತರಾಖಂಡ ಸಾವಯವ ಸರಕು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಹೇಳಿದ್ದಾರೆ.

ಹೆಚ್ಚುವರಿಯಾಗಿ, ಈ ವರ್ಷ, ಉತ್ತರಾಖಂಡ ಸರ್ಕಾರವು ಪ್ರಾಯೋಜಿತ ಸಬ್ಸಿಡಿಯನ್ನು 50% ರಿಂದ 75% ಕ್ಕೆ ಹೆಚ್ಚಿಸಿತು, ಇದು ರೈತರನ್ನು ಸಿರಿಧಾನ್ಯ ಬೆಳೆಯಲು ಉತ್ತೇಜಿಸಬಹುದು ಎಂಬ ಭರವಸೆ ಹೊಂದಲಾಗಿದೆ.

ಭಾರತದಲ್ಲಿ ಸಿರಿಧಾನ್ಯಕ್ಕೆ ಮುಂದುವರಿದ ಸವಾಲುಗಳು
ಸಿರಿಧಾನ್ಯ ಕೃಷಿಯನ್ನು ಹಸಿರು ಕ್ರಾಂತಿಯ ಪೂರ್ವದ ಮಟ್ಟಕ್ಕೆ ಮರುಸ್ಥಾಪಿಸಲು ಈ ಪ್ರೋತ್ಸಾಹಗಳು ಸಾಕಷ್ಟಿವೆಯೇ ಎಂಬುದು ಅಸ್ಪಷ್ಟವಾಗಿದೆ. ಬೆಳೆಗಳ 2023-2024 ಬೆಂಬಲ ಬೆಲೆಯಲ್ಲಿ ಹೆಚ್ಚಳದ ಹೊರತಾಗಿಯೂ, ಗೋಧಿಗೆ ಹೋಲಿಸಿದರೆ ರೈತರು ಸಜ್ಜೆ ಮತ್ತು ಫಿಂಗರ್ ರಾಗಿ ಬೆಳೆಯುವಾಗ ವೆಚ್ಚಕ್ಕಿಂತ ಕಡಿಮೆ ಆದಾಯವನ್ನು ಪಡೆಯುತ್ತಾರೆ, ಆದ್ದರಿಂದ ಅವರಿಗೆ ತುಲನಾತ್ಮಕವಾಗಿ ಲಾಭದಾಯಕವಾಗುವುದಿಲ್ಲ.

ಶಾಲಂದರ್ ಕುಮಾರ್ ಗಮನಿಸಿದಂತೆ, ರಾಗಿಯನ್ನು ಹೆಚ್ಚಾಗಿ ಕಡಿಮೆ (ಕಡಿಮೆ ಮೌಲ್ಯದ) ಕಡಿಮೆ ಫಲವತ್ತೆ ಹೊಂದಿದ ಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅಲ್ಲಿ ಇತರ ಪ್ರಧಾನ ಧಾನ್ಯಗಳು ಬೆಳೆಯುವುದಿಲ್ಲ ಎಂಬುದನ್ನು ಇದು ವಿವರಿಸುತ್ತದೆ. “ರಾಗಿ ಇಳುವರಿಯನ್ನು ಹೆಚ್ಚಿಸಬೇಕಾದರೆ, ನಾವು ಅದನ್ನು ಲಭ್ಯವಿರುವ ಉತ್ತಮ ಭೂಮಿಯಲ್ಲಿ ಬೆಳೆಯಲು ಪ್ರಾರಂಭಿಸಬೇಕು.

ಪೂರೈಕೆಯ ಸಮಸ್ಯೆಯನ್ನು ಪರಿಹರಿಸುವ ಮೊದಲು, ಎಲ್ಲಕ್ಕಿಂತ ಹೆಚ್ಚಾಗಿ, ಸಿರಿಧಾನ್ಯವು ರೈತರಿಗೆ ಆಕರ್ಷಕವಾಗಲು ಅವುಗಳ ಬಳಕೆ ಹೆಚ್ಚಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಸಿರಿಧಾನ್ಯದ ಬೇಡಿಕೆಯನ್ನು ಉಳಿಸಿಕೊಳ್ಳಲು, ದೇಶದ ಆಹಾರ ಪದ್ಧತಿಯಲ್ಲಿ ಮೂಲಭೂತ ಬದಲಾವಣೆ ಅಗತ್ಯ ಎಂದು ಜರ್ಧರ್ ನಂಬುತ್ತಾರೆ.

“ನಾವು ನಮ್ಮ ಹಳೆಯ ಆಹಾರ ಪದ್ಧತಿಗೆ ಹಿಂತಿರುಗಬೇಕಾಗಿದೆ.  ಕನಿಷ್ಠ ಬೆಂಬಲ ಬೆಲೆಯ ಮೂಲಕ ಆದಾಯ ಪಡೆಯಬಹುದು ಆದರೆ ಅಕ್ಕಿ ಮತ್ತು ಗೋಧಿ ತಿನ್ನುವುದನ್ನು ಮುಂದುವರಿಸುವುದರ ಅರ್ಥವೇನು?” ಎಂದು ಆ ಕೃಷಿಕರು ಕೇಳುತ್ತಾರೆ !

LEAVE A REPLY

Please enter your comment!
Please enter your name here