ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇನ್ನು ಮೂರು ದಿನ ಭಾರಿ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್‌

0
Monsoon clouds

 ಅಕ್ಟೋಬರ್‌ ೧ ರಿಂದ ಹಿಂಗಾರು ಹಂಗಾಮು ಆರಂಭವಾಗಿದೆ ಎಂದು ಹೇಳಲಾದರು ಕೂಡ ಕರ್ನಾಟಕ ರಾಜ್ಯದಿಂದ ಮುಂಗಾರು ಮಳೆ ಪರಿಪೂರ್ಣವಾಗಿ ನಿರ್ಗಮಿತವಾಗಿಲ್ಲ.  ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ  ಇನ್ನು ಕೆಲವು ದಿನ ಮುಂಗಾರು ಮಳೆ ಉಪಸ್ಥಿತಿ ಇರುವ ಸಾಧ್ಯತೆ ಇದೆ.

ಅಕ್ಟೋಬರ್‌ ೧ ರಿಂದ ಇವತ್ತಿನವರೆಗೂ ರಾಜ್ಯದಲ್ಲಿ ಮಳೆ ಕೊರತೆ ಶೇಕಡ ೬೧ರಷ್ಟಿದೆ.  ರಾಜ್ಯದ ಕರಾವಳಿಯಲ್ಲಿದು ಶೇಕಡ ೧೮ ಆದರೂ ವಾಡಿಕೆ ಮಳೆ ಆಗಿದೆ. ಉತ್ತರ ಒಳನಾಡಿನಲ್ಲಿ ಶೇಕಡ ೮೧ , ದಕ್ಷಿಣ ಒಳನಾಡಿನಲ್ಲಿ ಶೇಕಡ ೫೯ರಷ್ಟು ಕೊರತೆ ಆಗಿದೆ. ಬೆಂಗಳೂರು ಮಹಾನಗರದಲ್ಲಿ ಶೇಕಡ ೮೧ರಷ್ಟು ಆಗಿದೆ.  ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್‌ ೧ ರಿಂದ ಇವತ್ತಿನವರೆಗೂ ೬೧ ಶೇಕಡ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ೬೬.೭ ಮಿಲಿ ಮೀಟರ್‌ ಆಗಿದೆ. ಆಗಿರುವ ಮಳೆ ೧೧೨. ೪ ಮಿಲಿ ಮೀಟರ್‌

ದೀರ್ಘಾವಧಿ ಹವಾಮಾನ ಮುನ್ಸೂಚನೆ

ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ ಈ ಮೂರು ತಿಂಗಳುಗಳಲ್ಲಿ ಒಟ್ಟಾರೆ ನೋಡಿದಾಗ ಅನೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಈ ಪ್ರಮಾಣ ೫೦ ರಿಂದ ೬೦ ರಷ್ಟು ಹೆಚ್ಚಿರಬಹುದು.

ಅಕ್ಟೋಬರ್‌ ೦೮ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆ ಆಗಿದೆ.  ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿತ್ತು. ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ  ೯ ಸೆಂಟಿ ಮೀಟರ್‌ ಮಳೆಯಾಗಿದೆ.  ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ  ೮ ಸೆಂಟಿ ಮೀಟರ್‌, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ತಲಾ ೭ ಸೆಂಟಿ ಮೀಟರ್‌ ಮಳೆಯಾಗಿದೆ.

ಇಂದಿನ ವಾತಾವರಣದ ಮುಖ್ಯಾಂಶ

ಇಂದು ರಾಯಲಸೀಮಾದಿಂದ ತಮಿಳುನಾಡಿನ ಕನ್ಯಾಕುಮಾರಿ ತನಕ ಸಮುದ್ರ ಮಟ್ಟದಿಂದ ೧.೫ ಕಿಲೋ ಮೀಟರ್‌ ಅಂತರದಲ್ಲಿ ಟ್ರಫ್ಹ್‌  ಉಂಟಾಗಿದೆ.  ಇದರ ಪ್ರಭಾವದಿಂದ  ದಕ್ಷಿಣ ಒಳನಾಡಿಗೆ ಇನ್ನು ಮೂರು ದಿನ ಮಳೆ ಪ್ರಮಾಣ ಹೆಚ್ಚಾಗಿರಲಿದೆ.

ಯೆಲ್ಲೋ ಆಲರ್ಟ್‌

ಈ ಹಿನ್ನೆಲೆಯಲ್ಲಿ ಇಂದಿನಿಂದ ೩ ದಿನಗಳಿಗೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಆಲರ್ಟ್‌ ನೀಡಲಾಗಿದೆ.   ಆ ಜಿಲ್ಲೆಗಳೆಂದರೆ ದಕ್ಷಿಣ ಒಳನಾಡಿನ ಚಾಮರಾಜ ನಗರ,  ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು  ಕೋಲಾರ.

ಅಕ್ಟೋಬರ್‌ ೧೦ ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಚಾಮರಾಜ ನಗರ, ಕೊಡಗು, ರಾಮನಗರ, ಹಾಸನ. ಅಕ್ಟೋಬರ್‌ ೧೧ ರಂದು  ಕೊಡಗು, ಚಿಕ್ಕಮಗಳೂರು, ಚಾಮರಾಜ ನಗರ,  ಹಾಸನ ಈ ಜಿಲ್ಲೆಗಳ ಕೆಲವೆಡೆ ಭಾರಿ ಮಳೆ ಆಗುವ ಸಾಧ್ಯತೆ ಇದೆ.  ಈ ಹಿನ್ನೆಲೆಯಲ್ಲಿ ಹಳದಿ ಮುನ್ನೆಚ್ಚರಿಕೆ ನೀಡಲಾಗಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಇಂದಿನಿಂದ ಮೂರು ದಿನಗಳಿಗೆ ಗುಡುಗು ಮಿಂಚಿನ  ಮಳೆ ಆಗಲಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ೨೯ ಮತ್ತು ೨೧ ಡಿಗ್ರಿ ಸೆಲ್ಸಿಯಸ್‌ ಆಗಿರುತ್ತದೆ.

LEAVE A REPLY

Please enter your comment!
Please enter your name here