ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆ ರದ್ದು; ರೈತರಿಗೆ ಅನುಕೂಲ

0

ಭಾರತದ ಈರುಳ್ಳಿ ಬೆಳೆಗಾರರಿಗೆ ಅನುಕೂಲ ಮಾಡುವ ದಿಶೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ಮೇಲಿನ ಕನಿಷ್ಟ ರಫ್ತು ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಇದರಿಂದ  ವಿಶೇಷವಾಗಿ ವಿದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡುವುದಕ್ಕೆ ಅನುಕೂಲವಾಗಿದ್ದು ಇದರ ಪ್ರಯೋಜನ ಬೆಳೆಗಾರರಿಗೆ ದಕ್ಕಲಿದೆ.

ಈರುಳ್ಳಿಯ ರಫ್ತಿಗೆ ಈ ಹಿಂದೆ ನಿಗದಿಪಡಿಸಿದ್ದ ಕನಿಷ್ಠ ಬೆಲೆಯ ಮಿತಿಯನ್ನು ಶುಕ್ರವಾರ ಅಂದರೆ ಸೆಪ್ಟೆಂಬರ್ 13 ರಂದು ಕೇಂದ್ರ  ಸರ್ಕಾರ ರದ್ದುಗೊಳಿಸಿದೆ. ಸರ್ಕಾರವು ಈ ಹಿಂದೆ ಪ್ರತಿ ಟನ್‌ಗೆ USD 550 ಅನ್ನು ಕನಿಷ್ಠ ರಫ್ತು ಬೆಲೆಯಾಗಿ (MEP) ನಿಗದಿಪಡಿಸಿತ್ತು, ಇದರರ್ಥ ರೈತರು ತಮ್ಮ ಉತ್ಪನ್ನಗಳನ್ನು ವಿದೇಶದಲ್ಲಿ ಈ ದರಕ್ಕಿಂತ ಕಡಿಮೆ ಮಾರಾಟ ಮಾಡಲು ಸಾಧ್ಯವಿರಲಿಲ್ಲ.

ಶುಕ್ರವಾರ ಹೊರಡಿಸಲಾದ ಡಿಜಿಎಫ್‌ಟಿ ಅಧಿಸೂಚನೆಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂಇಪಿಯನ್ನು ತೆಗೆದುಹಾಕಿದೆ. ಪ್ರಮುಖ ಈರುಳ್ಳಿ ಉತ್ಪಾದಿಸುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಈ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮವು ಸರಕುಗಳ ರಫ್ತು ಉತ್ತೇಜಿಸಲು ಸಹಾಯ ಮಾಡುತ್ತದೆ.

“ಈರುಳ್ಳಿ ರಫ್ತಿನ ಮೇಲಿನ ಕನಿಷ್ಟ ರಫ್ತು ಬೆಲೆ (MEP) ಷರತ್ತನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ತೆಗೆದುಹಾಕಲಾಗುತ್ತದೆ” ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here