Home Blog Page 3
ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ. ಮಾರ್ಚ್ 30ರಂದು ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರವರೆಗೆ ನೀರಾವರಿಗೆ 11ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ...
ರೈತರಿಂದ ಹಾಲು ಖರೀದಿಸುವಾಗ  ಪ್ರತಿ ಒಂದು  ಲೀಟರ್‌ಗೆ ಪಾವತಿಸುವ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇದು ಹಾಲಿನ ಕೊಬ್ಬು ಮತ್ತು ಘನ-ಅಲ್ಲದ-ಕೊಬ್ಬು (SNF) ಪ್ರಮಾಣ, ಸಹಕಾರಿ ಹಾಲು ಸಂಘಗಳ ಖರೀದಿ ನೀತಿಗಳು, ಮಾರುಕಟ್ಟೆ ಬೇಡಿಕೆ ಮತ್ತು ಪ್ರಾದೇಶಿಕ ಉತ್ಪಾದನಾ ವೆಚ್ಚಗಳ ಮೇಲೆ ಅವಲಂಬಿತವಾಗಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಂತಹ ಪ್ರಮುಖ ಹಾಲು ಉತ್ಪಾದಕ ರಾಜ್ಯಗಳಲ್ಲಿ ಪ್ರಸಿದ್ಧ ಸಹಕಾರಿ ಸಂಸ್ಥೆಗಳಾದ ಅಮುಲ್ (ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್), ನಂದಿನಿ (ಕರ್ನಾಟಕ ಮಿಲ್ಕ್ ಫೆಡರೇಶನ್) ಮತ್ತು ಇತರೆ...
ಇವತ್ತು (ಮಾರ್ಚ್ 26, 2025) ಶೃಂಗೇರಿ ಸನಿಹದ ನಮ್ಮೂರು ಜೋಗಿಬೈಲು ಗ್ರಾಮದಲ್ಲಿ 2 ಸೆ.ಮೀ.  ಪ್ರಮಾಣದಒಳ್ಳೆಯ ಮಳೆಯಾಯ್ತು. ಹಿಂದಿನ ವಾರ ಎರಡು ದಿನ ಮತ್ತು ನಿನ್ನೆ ಮಳೆ ಬಂದಿತ್ತಾದರೂ ಅದು ಒಟ್ಟು 1.5 ಸೆ ಮೀ ಆಗಿತ್ತು. ಅಂದರೆ ಒಟ್ಟು 3.5 ಸೆ. ಮೀ. ಮಳೆ ಬಿದ್ದಂತಾಯ್ತು. ನಮ್ಮದು 2 ಹೆಕ್ಟೇರ್ ತೋಟ. ತೋಟಕ್ಕೆ ಎಷ್ಟು ನೀರು ಸುರಿಯಿತು? 1 ಮಿ ಮೀ ಮಳೆ ಅಂದರೆ 1 ಚದರ ಮೀಟರ್ ನಲ್ಲಿ 1ಲೀ ನೀರು ಸುರಿಯುತ್ತೆ. 35 ಮಿ. ಮೀ. ಅಂದರೆ 1 ಚದರ...
ಬೆಂಗಳೂರು, ಮಾರ್ಚ್ 19: ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಪ್ರತಿ ಕ್ವಿಂಟಾಲ್  ತೊಗರಿಗೆ  ರೂಪಾಯಿ  7550 ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ  ರೂಪಾಯಿ  450 ಪ್ರೋತ್ಸಾಹಧನ ನೀಡಿ ರೈತರಿಂದ ತೊಗರಿ ಬೇಳೆ ಖರೀದಿ  ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು. ಅವರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕರಾದ ರವಿಕುಮಾರ್ ಹಾಗೂ ಇತರ ಸದಸ್ಯರು ನಿಯಮ 330 ರಡಿ ಕಲಬುರಗಿ ಜಿಲ್ಲೆಯಲ್ಲಿ ನೇಟೆ ರೋಗ, ಅತಿವೃಷ್ಠಿ/ ಅನಾವೃಷ್ಠಿ ಯಿಂದ ತೊಗರಿ ಬೆಳೆಗಾರರ ಬದುಕು...
ಬೆಂಗಳೂರು, ಮಾರ್ಚ್ 20: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿನ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಟ್ಟು 1726 ಕೆರೆಗಳಿರುತ್ತವೆ. ಈ ವ್ಯಾಪ್ತಿಯಲ್ಲಿನ ಕೆರೆಗಳ ದುರಸ್ಥಿ ಕಾಮಗಾರಿಗಳನ್ನು ಅವುಗಳ ದುರಸ್ಥಿಯ ಅಗತ್ಯತೆ ಹಾಗೂ ಅನುದಾನದ ಲಭ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಗ್ರಾಮೀಣಾಭಿವೃದ್ಧಿ...
ಬೆಂಗಳೂರು, ಮಾರ್ಚ್ 19: ಜಲ‌ ಮತ್ತು ವಾಯು ಕಾಯ್ದೆಯನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಬೃಹತ್ ಮತ್ತು ಮಧ್ಯಮ‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಅವರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯ ಬಸನಗೌಡ ಬಾದರ್ಲಿ, ವಸಂತ್ ಕುಮಾರ್ ಹಾಗೂ ಇತರರು ನಿಯಮ 330 ರಡಿ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರವು ಬಲ್ಡೋಟಾ ಕಂಪೆನಿಗೆ ಉಕ್ಕು ಉತ್ಪಾದನಾ ಕಾರ್ಖಾನೆ ನಿರ್ಮಿಸಲು ಅನುಮತಿ ನೀಡಿರುವುದರಿಂದ ಆ ಭಾಗದ ಜನರ ಬದುಕಿಗೆ ಸಂಕಷ್ಟ ತಂದೊಡ್ಡಿದೆ ಎಂಬ ಬಗ್ಗೆ ನೀಡಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಕರ್ನಾಟಕ...
ಬೆಂಗಳೂರು, ಮಾರ್ಚ್ 19: ಪಶುಪಾಲಕ ಜಾನುವಾರುಗಳಿಗೆ ಬೇಸಿಗೆಯಲ್ಲಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಸರ್ಕಾರ ಅಗತ್ಯ  ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ‍್ನೆಗೆ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರ ಪರಿವಾಗಿ ಉತ್ತರಿಸಿದ ಸಚಿವರು,  ಪಶುಪಾಲಕ ಜಾನುವಾರುಗಳಿಗೆ ಬೇಸಿಗೆಯಲ್ಲಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳ ತೆಗೆದುಕೊಂಡಿದ್ದು,  ಸಾಪ್ತಾಹಿಕ ಮೇವಿನ ವರದಿಯನ್ವಯ ಯಾವುದೇ ತಾಲ್ಲೂಕಿನಲ್ಲಿ...
ಬೆಂಗಳೂರು, ಮಾರ್ಚ್ 19: ನೈಜತೆಯಿಂದ ಕೂಡಿರುವ ಜಮೀನುಗಳಿಗೆ ಖಾತೆಗಳನ್ನು ನೀಡಲು ಅಗತ್ಯ ಕ್ರಮ ವಹಿಸಲಾಗುವುದು. ಅಂದಿನ ಕಾನೂನುಗಳು ಅಂದಿನ ದಿನಕ್ಕೆ ಅನ್ವಯವಾಗಲಿದೆ. ಇಂದಿನ ಕಾನೂನುಗಳು ಈ ಹಿಂದಿನ ದಿನಗಳ ಕಾನೂನುಗಳಿಗೆ ಅನ್ವಯವಾಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ಯತೀಂದ್ರ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನಡವಳಿ, ಸಾಗುವಳಿ ಚೀಟಿ ವಿತರಣಾ ವಹಿ, ಕಿಮ್ಮತ್ತು ಪಾವತಿಸಿರುವ ವಹಿ ಇತ್ಯಾದಿಗಳಲ್ಲಿ...
ಬೆಂಗಳೂರು- ಮಾರ್ಚ್ 19:ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚೀಲನಹಳ್ಳಿ ಗ್ರಾಮದ ಸರ್ವೆ ನಂ. 14 ರಲ್ಲಿ 20 ಎಕರೆ ಭೂಮಿಯನ್ನು ತುಮಕೂರಿನ ಜಿಲ್ಲಾಧಿಕಾರಿ ಅವರಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಮಂಜೂರು ಮಾಡಲಾಗಿದೆ. ಇಲ್ಲಿ ಆಧುನಿಕ ಸಂಸ್ಕರಣಾ ಕೇಂದ್ರವನ್ನು (ವಧಾಗಾರ) ಸ್ಥಾಪನೆ ಮಾಡಲಾಗಿದೆ. ಕಾಮಗಾರಿಯು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೆ. ವೆಂಕಟೇಶ್ ಅವರ ಚುಕ್ಕೆ ಗುರುತಿನ...
ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ಅಡಿಯಿಟ್ಟಾಗಿದೆ. ಕೃಷಿಕ್ಷೇತ್ರದಲ್ಲಿ ಅದರ ಬಳಕೆ ಗಮನಾರ್ಹ ಬದಲಾವಣೆಗಳನ್ನು ಉಂಟು ಮಾಡುತ್ತಿದೆ. ಇದಕ್ಕೆ ಪ್ರಸ್ತುತ ನಿದರ್ಶನ ಮಹಾರಾಷ್ಟ್ರ ರಾಜ್ಯದಲ್ಲಿ ಕಬ್ಬಿನ ಕೃಷಿಗೆ ಅದನ್ನು ಬಳಕೆ ಮಾಡಿರುವುದು. ಇದರಿಂದ ಇಳುವರಿ ಗಮನಾರ್ಹವಾಗಿ ಹೆಚ್ಚಿರುವುದು. ಬಹುಮುಖ್ಯವಾಗಿ ನೀರು, ಪೋಷಕಾಂಶದ ಬಳಕೆ ಪ್ರಮಾಣ ಕಡಿಮೆಯಾಗಿದೆ. ಇವೆಲ್ಲದರ ಪರಿಣಾಮ ಆಗುತ್ತಿದ್ದ ವೆಚ್ಚದಲ್ಲಿ ಗಮನಾರ್ಹ ಉಳಿತಾಯವಾಗಿದೆ. ಪೂನಾ, ಬಾರಾಮತಿ,  ಸಾಂಗ್ಲಿ, ಸತಾರಾ, ಕೊಲ್ಹಾಪುರ ಈ ಪ್ರದೇಶಗಳಲ್ಲಿ ಕಬ್ಬುಕೃಷಿ ಅಧಿಕ ಪ್ರಮಾಣದಲ್ಲಿ ನಡೆಯುತ್ತದೆ. ಪೂನಾ ಸಮೀಪದ ಬಾರಾಮತಿಯಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ...

Recent Posts