ಉತ್ತಮ ಪ್ರಚಾರ ನೀಡಿ ತರಕಾರಿ-ಫಲ ಪ್ರದರ್ಶನ ಮಾಡಿದರೆ ಬೆಂಗಳೂರಿಗರು ಸ್ಪಂದಿಸುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆ; ಬೆಂಗಳೂರಿನ ಲಾಲ್ಬಾಗಿನಲ್ಲಿ ನವೆಂಬರ್ನಲ್ಲಿ ಐದು ದಿನ ಫಲ ಪ್ರದರ್ಶನ-ಮಾರಾಟ ಏರ್ಪಾಡು. ಈಶಾನ್ಯ ರಾಜ್ಯಗಳವರಿಗಾಗಿಯೇ ಈ ವಿಶೇಷ ವ್ಯವಸ್ಥೆ. ಈಶಾನ್ಯ ರಾಜ್ಯಗಳ ಕೃಷಿ-ತೋಟಗಾರಿಕೆ ಇಲಾಖೆಗಳವರು ರೈತರೊಂದಿಗೆ ಬಂದು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಳಿಗೆ ತೆರೆದಾಗ ಸ್ಪಂದನೆ ದೊರೆಯುತ್ತದೋ ಇಲ್ಲವೂ ಎಂಬ ಆತಂಕ ಹೆಚ್ಚಿನವರಲ್ಲಿತ್ತು. ಸಂಜೆ ಇವರ ಆಕಂಕ ಮರೆಯಾಗಿ ಉತ್ಸಾಹ-ಉಲ್ಲಾಸ ಮನೆಮಾಡಿತ್ತು. ತಂದ ಸರಕು ಕೂಡ ಸಾಲುವುದಿಲ್ಲ ಎಂಬ ವಿಶ್ವಾಸ ಮೊದಲದಿನವೇ ಮೂಡಿತ್ತು.

ಮಿಜೋರಾಂ, ಮಣಿಪಾಲ್, ನಾಗಾಲ್ಯಾಂಡ್ ರೈತರಲ್ಲದೇ ಮಹಾರಾಷ್ಟ್ರದ ರೈತರೂ ಸ್ವಯಂ ಆಸಕ್ತಿಯಿಂದ ಭಾಗವಹಿಸಿದ್ದರು. ಇವರೊಂದಿಗೆ ಕನರ್ಾಟಕದ ಹಾಪ್ಕಾಮ್ಸ್, ಸಗಟು ತರಕಾರಿ ಮಾರಾಟ ಮಾಡುವ ಸಂಸ್ಥೆಗಳೂ ಭಾಗವಹಿಸಿದ್ದವು.ಈಶಾನ್ಯ ರಾಜ್ಯಗಳ ವಿಶೇಷ ಹಣ್ಣಾದ ಕಿವಿ ಹಣ್ಣು ಸ್ಥಳೀಯರ ಗಮನ ಸೆಳೆಯಿತು. ಅಲ್ಲಿನ ಪೈನಾಫಲ್ ಹುಳಿಯಿರಬಹುದೇ ಎಂಬ ಅನುಮಾನದೊಂದಿಗೆ ಸ್ಯಾಂಪಲ್ಗೆಂದು ನೀಡಿದ ಹಣ್ಣಿನ ತುಂಡು ಬಾಯಿಗಿಟ್ಟಾಗ ಅನುಮಾನ ದೂರ. ತಮಗೆ ಬೇಕಿರುವಷ್ಟು ಹಣ್ಣಿಗೆ ಆರ್ಡರ್. ಅಲ್ಲಿಯ ಕಿತ್ತಳೆ ಹಣ್ಣುಗಳ ರುಚಿಯೂ ಸ್ವಾದಿಷ್ಟಕರವಾಗಿತ್ತು. ಎರಡೇ ದಿನದಲ್ಲಿ ಎಂಭತ್ತು ಟನ್ ಕಿತ್ತಳೆ ಖಾಲಿಯಾಗಿತ್ತು. ಮೊದಲ ದಿನವೇ ಸ್ಪಂದನೆ ಗಮನಿಸಿದ ಅಲ್ಲಿಂದ ಬಂದಿದ್ದ ಅಧಿಕಾರಿಗಳು ಮತ್ತಷ್ಟು ಟನ್ ಕಳುಹಿಸಿಕೊಡಲು ತಮ್ಮ ಕಛೇರಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಒಂದು ಕೆ.ಜಿ. ಕಿತ್ತಳೆಗೆ 50 ರುಪಾಯಿ. ಐದು ದಿನದಲ್ಲಿ ಮಾರಾಟವಾದ ಒಟ್ಟು ಹಣ್ಣು 180 ಟನ್ನಿಗೂ ಅಧಿಕ!

ಬೆಂಗಳೂರಿಗರ ಸ್ಪಂದನೆ-ಸಹಕಾರ ನೋಡಿ ಈಶಾನ್ಯ ರಾಜ್ಯಗಳ ರೈತರಿಗೆ ಮತ್ತು ಮಾರಾಟ ಪ್ರತಿನಿಧಿಗಳಿಗೆ ಖುಷಿ. ಬೆಂಗಳೂರಿಗರ ಸಹೃದಯತೆ ಮರೆಯುವಂತಿಲ್ಲ ಎನ್ನುತ್ತಿದ್ದರು. ವ್ಯಾಪಾರದ ಭರಾಟೆ ಹೇಗಿತ್ತೆಂದರೆ ತಂದ ಹಣ್ಣುಗಳೆಲ್ಲ ಮೂರನೇ ದಿನದ ವೇಳೆಗೆ ಖಾಲಿಯಾಗಿದ್ದವು. ಹಾಗೆಯೇ ಇವರಿದ್ದ ಮಳಿಗೆಗಳು ಖಾಲಿ ಹೊಡೆಯುತ್ತಿದ್ದವರು. ಪೂರ್ಣ ಸರಕು ಮಾರಿದವರು ಉತ್ಸಾಹದಿಂದ ಬೆಂಗಳೂರು ನೋಡಲು ಹೋಗಿದ್ದರು.

ಪೈನಾಪಲ್, ಕಿವಿಹಣ್ಣುಗಳಿಗೂ ಅಧಿಕ ಬೇಡಿಕೆ. ಒಂದು ಕೆ.ಜಿ. ಕಿವಿ ಹಣ್ಣಿಗೆ 240 ರುಪಾಯಿ. ಇಷ್ಟು ಬೆಲೆಯಿದ್ದರೂ ಖಚರ್ಾದ ಹಣ್ಣು ಆರು ಕ್ವಿಂಟಾಲಿಗೂ ಹೆಚ್ಚು. ಇದರೊಂದಿಗೆ ಈಶಾನ್ಯ ರಾಜ್ಯಗಳಿಂದ ತಂದಿದ್ದ ಶುಂಠಿ, ಅರಿಶಿಣ, ನಾಗಾ ಮೆಣಸಿನಕಾಯಿಗೂ ಪುಲ್ ಡಿಮ್ಯಾಂಡ್. ಇದರೊಂದಿಗೆ ಮಹಾರಾಷ್ಟ್ರದ ರೈತರು ತಂದಿದ್ದ ಉತ್ಕೃಷ್ಟ ದಜರ್ೆಯ ನಿಂಬೆಹಣ್ಣು ಗಮನ ಸೆಳೆಯಿತು. ತಂದ ಸರಕು ಕೂಡ ಖಾಲಿಯಾಯಿತು. ಈ ನಿಂಬೆಹಣ್ಣಿನಿಂದ ಮಾಡಿದ ಶರಬತ್ತು ಕುಡಿದವರು ಅದರ ವಿಶಿಷ್ಟ ರುಚಿ-ಸ್ವಾದಕ್ಕೆ ಖುಷ್. ಒಂದು ಗ್ಲಾಸ್ ಶರಬತ್ತಿಗೆ 10 ರುಪಾಯಿ.

ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಸುತ್ತಮುತ್ತಲು ಬೆಳೆದಿರುವ ತರಕಾರಿಗಳನ್ನು ಇಕೋವಾ ಸಂಸ್ಥೆ ಮಾರಾಟಕ್ಕೆ ಇಟ್ಟಿತ್ತು. ಈ ತರಕಾರಿಗಳಿಗೂ ಬೇಡಿಕೆ.ಟೊಮ್ಯಾಟೋ, ಎಲೆಕೋಸು, ಹುರಳಿಕಾಯಿ, ಸೌತೇಕಾಯಿ, ಹಾಗಲಕಾಯಿ, ಹೀರೇಕಾಯಿ ಇತ್ಯಾದಿ ತರಕಾರಿ ಅಲ್ಲಿ ದೊರೆಯುತ್ತಿದ್ದವು. ಪ್ರತಿದಿನ ಫ್ರೆಶ್ ತರಕಾರಿ ಮಾರಾಟಕ್ಕೆ ಬರುತ್ತಿತ್ತು. ಐದು ದಿನದ ಅವಧಿಯಲ್ಲಿ ಮಾರಾಟವಾದ ಒಟ್ಟು ತರಕಾರಿ 70 ಟನ್ನಿಗೂ ಹೆಚ್ಚು

ಹಾಟರ್ಿ ಸಂಗಮ್ ಅನ್ನು ರಾಜ್ಯದ ತೋಟಗಾರಿಕೆ ಇಲಾಖೆ ವ್ಯವಸ್ಥೆ ಮಾಡಿತ್ತು. ಬೆಂಗಳೂರಿಗರು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆ ಅವರಲ್ಲಿತ್ತು. ಆದರೆ ಬಂದ ಬೇಡಿಕೆ ಅವರ ನಿರೀಕ್ಷೆಗೂ ಮೀರಿತ್ತು. ಇದರಿಂದ ಅಧಿಕಾರಿಗಳೂ ಖುಷಿಯಾಗಿದ್ದಾರೆ. ಇಂಥ ಪ್ರದರ್ಶನ-ಮಾರಾಟಗಳನ್ನು ಹೆಚ್ಚು-ಹೆಚ್ಚಾಗಿ ಆಯೋಜಿಸಲು ಯೋಜಿಸುತ್ತಿದ್ದಾರೆ.

ಸಾವಯವ ಹಣ್ಣು:
ಈಶಾನ್ಯ ರಾಜ್ಯಗಳಿಂದ ಬಂದಿದ್ದ ರೈತರು ಸಾವಯವ ಪದ್ದತಿಯಲ್ಲಿಯೇ ತೋಟಗಾರಿಕೆ ಅಳವಡಿಸಿದವರು. ಶ್ರಮಪಟ್ಟರೇ ಹೆಚ್ಚು ಖರ್ಚಿಲ್ಲದೇ ಬೆಳೆ ತೆಗೆಯಬಹುದು. ಸುಸ್ಥಿರ ತೋಟಗಾರಿಕೆ ಮಾಡಬಹುದು. ಇದರಿಂದ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬುದು ಅವರ ಅಭಿಪ್ರಾಯ. ನಾಗಾಲ್ಯಾಂಡಿನಲ್ಲಿ ಕಿತ್ತಳೆ ಪ್ರಮುಖ ತೋಟಗಾರಿಕೆ ಬೆಳೆ. ಇಂಥ ತೋಟಗಳಲ್ಲಿ ಶುಂಠಿ, ಅನಾನಸ್ ಮತ್ತು ನಾಗಾ ಮೆಣಸಿನಕಾಯಿಗಳನ್ನು ಚೆನ್ನಾಗಿ ಸಾವಯವ ಕೃಷಿಪದ್ದತಿಯಲ್ಲಿ ಬೆಳೆಯುವ ರೈತರೂ ಇದ್ದರು. ತೋಟದಲ್ಲಿ ಏಕಬೆಳೆಗಿಂತ ಹೆಚ್ಚು ಬೆಳೆಗಳನ್ನು ಬೆಳೆಯುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ ಎಂಬುದು ಅವರ ಅನಿಸಿಕೆ. ಇವರು ಬೆಳೆಯುತ್ತಿರುವ ಕಿತ್ತಳೆ, ಅನಾನಸ್ ಹಾಗೂ ಸಾಂಬಾರ ಬೆಳೆಗಳಿಗೆ ವಿದೇಶದ ಮಾರುಕಟ್ಟೆಯೂ ಇದೆ. ಕೇಂದ್ರ ಸರಕಾರ ತಂದಿರುವ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ನಂತರ ಸಾವಯವದಲ್ಲಿ ಹಣ್ಣು ಮತ್ತು ಸಾಂಬಾರ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆಯೂ ಅಲ್ಲಿ ಅಧಿಕವಾಗಿದೆ.

LEAVE A REPLY

Please enter your comment!
Please enter your name here