ತೆಂಗಿನ ವಿಸ್ಮಯ ; ಗ್ಯಾಂಗ್ರೀನ್ ತರದ ಗಾಯ ಮಾಯ !

0
ಲೇಖಕರು: ಅಣೆಕಟ್ಟೆ ವಿಶ್ವನಾಥ್

ಕಳೆದ ಹದಿನೈದು ದಿವಸಗಳ ಹಿಂದೆ, ಬಸ್ಸಿನಲ್ಲಿ ರಾತ್ರಿ ಪ್ರಯಾಣಿಸುವಾಗ ನನ್ನ ಕಾಲಿನ ಬೆರಳಿನ ಉಗುರು ಕಿತ್ತು ಹೋಗಿತ್ತು. ರಕ್ತ ವಿಪರೀತ ಸೋರಿ ಹೋಗಿತ್ತು. ಉಗುರು ಬಿದ್ದು ಹೋದಾಗ ಆಗುವ ಯಾತನೆ ಇದೆಯಲ್ಲ ಅದು ನರಕ ಯಾತನೆ. ರಕ್ತ ಹೋಗಿದ್ದಕ್ಕೆ ದೇಹದಲ್ಲಿ ಚಳಿ ಚಳಿಯಾಗುತ್ತಾ ತುಂಬಾ ಹಿಂಸೆಯಾಗಿತ್ತು. ರಾತ್ರಿ ಎರಡು ಗಂಟೆ ಸುಮಾರಿಗೆ ಮನೆಗೆ ಬಂದವನು ಗಾಯವನ್ನು ತೊಳೆದು ಒಣಗಿದ ಶುದ್ಧ ಬಟ್ಟೆಯಿಂದ ಒಣಗಿಸಿ ಅದಕ್ಕೆ ವರ್ಜಿನ್ ಕೊಕೊನಟ್ ಆಯಿಲ್ ಹಚ್ಚಿ ಬ್ಯಾಂಡೇಡ್ ಕಟ್ಟಿದೆನು.

ಹೀಗೆ ಮಾಡಲು ಕಾರಣ ಏನೆಂದರೆ, ಪ್ರೊಫೆಸರ್ ಬ್ರೂಸ್ ಫೈಫ್ ಬರೆದಿರುವ ವರ್ಜಿನ್ ಕೊಕೊನಟ್ ಆಯಿಲ್ ಎಂಬ ಪುಸ್ತಕದಲ್ಲಿ ಕತ್ತರಿಸಿದ ಗಾಯಕ್ಕೆ ವರ್ಜಿನ್ ಕೊಕೊನಟ್ ಆಯಿಲ್ ಔಷಧಿ ಎಂಬುದನ್ನು ಅನುಭವ ಸಮೇತ ವಿವರಿಸಿದ್ದಾರೆ. ಅಷ್ಟೇ ಅಲ್ಲ ಆ ಪುಸ್ತಕದಲ್ಲಿ ಗಾಯ ಹೇಗೆ ವಾಸಿಯಾಯಿತೆಂದು ಹೇಳುತ್ತಾರೆಂದರೆ ಅದನ್ನು ನಂಬುವುದೂ ಕಷ್ಟ. ಅದಕ್ಕೆ ನಾನು ಯಾವಾಗಲೂ ತೇಜಸ್ವಿ ಪುಸ್ತಕದಲ್ಲಿ ಬರುವ ವಿಸ್ಮಯದಂತೆ ಎಂದು ಹೇಳುತ್ತಿರುತ್ತೇನೆ. ಒಂದು ಉದಾಹರಣೆಗೆ ಹೇಳಬೇಕೆಂದರೆ, ತೇಜಸ್ವಿ ಪುಸ್ತಕದಲ್ಲಿ ತನ್ನ ಮನೆಯ ಕೆಲಸದ ಮಾರನು ಹೇಳುತ್ತಿದ್ದ ಗಿಡಮೂಲಿಕೆಯ ಕಥೆಯನ್ನು ಹೀಗೆ ತಿಳಿಸಿದ್ದಾರೆ.

ಒಮ್ಮೆ ಮಾರ ಕಾಡಿಗೆ ಕಳಲೆ ಕಡಿಯಲು ಹೋಗಿದ್ದನಂತೆ. ಬಿದಿರಿನ ಸಂದಿಯೊಳಗೆ ಕೈ ಹಾಕಿ ಕಳಲೆ ಕಡಿಯುತ್ತಿರಬೇಕಾದರೆ ಕೈಗೆ ಕತ್ತಿ ತಾಗಿ ಬಲವಾದ ಗಾಯ ಆಯ್ತು. ರಕ್ತನಾಳವೇ ಕತ್ತರಿಸಿ ಹೋಗಿ ರಕ್ತ ಚಿಲುಮೆಯಂತೆ ನುಗ್ಗಿತು. ಪಕ್ಕದಲ್ಲಿದ್ದವರೆಲ್ಲಾ ಗಾಬರಿಯಾಗಿ ರಕ್ತ ಹೊರ ಚಿಮ್ಮುವುದನ್ನು ನಿಲ್ಲಿಸಲು ಯಾವುದೋ ಎಲೆ ತಂದು ಗಾಯದ ಮೇಲಿಟ್ಟು ಪಂಚೆ ಹರಿದು ಬ್ಯಾಂಡೇಜು ಮಾಡಿದರು.

ಮಾರ ಗಾಯದ ಕೈ ಅಲುಗಾಡಿಸದೆ ಹಿಡಿದುಕೊಂಡು ಇಲಾಜು ಮಾಡಿಸಲು ಹುಲಿಹಂದಲು ದೊರೆ ಹತ್ತಿರ ಹೋದ. ದೊರೆ ಔಷಧಿ ಬಾಟ್ಲಿ, ಹತ್ತಿ, ಗಾಯಕ್ಕೆ ಹಾಕುವ ಪುಡಿ ಎಲ್ಲ ರೆಡಿ ಮಾಡಿ, ಮಾರನ ಗಾಯಕ್ಕೆ ಸುತ್ತಿದ ಬ್ಯಾಂಡೇಜು ಬಿಚ್ಚಿ ಗಾಯಕ್ಕೆ ಮುಚ್ಚಿದ್ದ ಎಲೆ ತೆಗೆದನಂತೆ, ಆಶ್ಚರ್ಯ! ಒಳಗೆ ಗಾಯವೂ ಇಲ್ಲ. ಗಾಯದ ಕುರುಹೂ ಇಲ್ಲ! ದೊರೆಗೆ ಮಾರನ ಮೇಲೆ ಸಿಟ್ಟು ಬಂತು. “ಎಲಾ ನಿನ್ನ! ತಮಾಷೆ ಮಾಡುತ್ತಿದ್ದೀಯಾ?” ಎಂದು ರೇಗೆದನಂತೆ.

ಮಾರ ತನ್ನ ಮೈ ಕೈ ಎಲ್ಲಾ ಆಗಿದ್ದ ರಕ್ತ. ಕತ್ತಿಗೆ ಹಿಡಿದಿದ್ದ ರಕ್ತ ಎಲ್ಲಾ ತೋರಿಸಿ ತಾನು ಖಂಡಿತ ನಾಟಕ ಆಡುತ್ತಿಲ್ಲ ಎಂದು ಗೋಗರೆದ. ದೊರೆಗೆ ಅ ಅವನ್ನೆಲ್ಲಾ ನೋಡಿದ ಮೇಲೆ ನಂಬಿಕೆ ಬಂತು. ಮಾರನ ಗಾಯದ ಮೇಲೆ ಇಟ್ಟಿದ್ದ ಎಲೆಯನ್ನು ತಗೊಂಡು “ ಈ ಎಲೆಯ ಗಿಡ ಎಲ್ಲಿದೆ ತೋರಿಸು. ನನ್ನ ಇಡೀ ತೋಟ ನಿನಗೆ ಬರೆದು ಕೊಡುತ್ತೇನೆ” ಎಂದು ಹೇಳಿದ. ಮಾರ ದೊರೆ ಕರೆದುಕೊಂಡು ಕಾಡಿಗೆ ಹೊರಟ. ಬೆಳಗಿಂದ ಸಾಯಂಕಾಲದವರೆಗೆ ಇಡೀ ಕಾಡೆಲ್ಲ ಸುತ್ತುವರಿದರೂ ಆ ಎಲೆಯನ್ನು ಹೋಲುವ ಎಲೆಯ ಗಿಡ ಕಾಡಿನಲ್ಲಿ ಸಿಗಲಿಲ್ಲ.

ದೊರೆಗೆ ಮಾರ ಬೇಕೆಂದೇ ಆ ಗಿಡ ತೋರಿಸದೆ ಈ ರೀತಿ ಕಾಡಿನಲ್ಲಿ ಅಲೆಸುತ್ತಿದ್ದಾನೆ. ಇಡೀ ತೋಟ ಬರೆದುಕೊಡುತ್ತೇನೆ ಎಂದು ಹೇಳಿದರೂ ಇನವಿಗೆ ತೃಪ್ತಿ ಇಲ್ಲವಲ್ಲ ೆಂದು ಸಿಟ್ಟೇ ಬಂದಿತಂತೆ. ಕೋವಿ ತಂದು “ತೋರಿಸುತ್ತಿಯೋ ಇಲ್ಲವೇ ಇದರಲ್ಲಿ ನಿನ್ನನ್ನು ಸುಟ್ಟುಬಿಡಲೋ ?” ಎಂದು ಕೇಳಿದನಂತೆ. ಮಾರನಿಗೆ ಝಂಗಾಬಲವೇ ಉಡುಗಿ ಗೋಳೋ ಎಂದು ಅಳುತ್ತಾ ದೂರೆ ಕಾಲಿಗೆ ಬಿದ್ದು ಖಂಡಿತ ಗೊತ್ತಿಲ್ಲ ಎಂದು ಹಳಿದ್ದಕ್ಕೆ ದೊರೆ ಕುಪಿತನಾಗಿ “ಗೆಟೌಟ್” ಎಂದು ಬಯ್ದು ಓಡಿಸಿದನಂತೆ. (ಮೂಲಿಕೆ ಬಳ್ಳಿಯ ಸುತ್ತ ಲೇಖನ)

ಪ್ರೊಫೆಸರ್ ಬ್ರೂಸ್ ವರ್ಜಿನ್ ಕೊಕೊನಟ್ ಆಯಿಲ್ ಕುರಿತು ಬರೆದಿರುವ ಕಥೆಗಳಲ್ಲಿ ಇಂತಹದೇ ವಿಸ್ಮಯಗಳಿವೆ. ಅದಿರಲಿ, ಈ ನನ್ನ ಗಾಯದ ವಿಷಯಕ್ಕೆ ವಾಪಸ್ಸು ಬಂದರೆ, ಎರಡನೇ ದಿನವೂ ಬೆಳಿಗ್ಗೆ ಬ್ಯಾಂಡೇಡ್ ತೆಗೆದು ವರ್ಜಿನ್ ಕೊಕೊನಟ್ ಆಯಿಲ್ ಹಚ್ಚಿದೆನು. ಎರಡನೆ ದಿನ ಸಂಜೆಯ ಹೊತ್ತಿಗೆ ಸ್ವಲ್ಪ ಕೀವು ಕಾಣಿಸಿಕೊಂಡಿತು. ಮನೆಯವರು ಇದಕ್ಕೆ ಟಿಟಿ ಇಂಜಕ್ಷೆನ್ ತೆಗೋಬೇಕು ಎಂದರು. ಗಾಯಕ್ಕೆಲ್ಲಾ ಏನಕ್ಕೆ ಇಂಜಕ್ಷನ್ ಎಂದು ನಾನು ಚಾರ್ ಕೋಲ್ ಪೌಡರ್ ಬಳಸಿದೆ. ಚಾರ್ ಕೋಲ್ ಪೌಡರ್ ಎಂದರೆ ತೆಂಗಿನ ಚಿಪ್ಟನ್ನು ಇದ್ದಿಲು ಮಾಡಿ ಅದನ್ನು ಸಣ್ಣಗೆ ಪುಡಿ ಮಾಡಿ ಜರಡಿಯಲ್ಲಿ ಸೋಸಿ ಇಟ್ಟುಕೊಂಡು ಹಲ್ಲುಜ್ಜಲು ಬಳಸುತ್ತೇನೆ. ಇದನ್ನು ನಾನು ಗಾಯಕ್ಕೆ ಹಾಕಿ ಬ್ಯಾಂಡೇಜ್ ಹಾಕಿದೆನು.

ಗ್ಯಾಂಗ್ರೀನ್ ತರದ ಗಾಯಗಳೂ ಆಕ್ಟಿವೇಟೆಟ್ ಚಾರ್ ಕೋಲ್ ಬಳಸಿದಾಗ ರಾಕ್ಷಸರೀತಿಯಲ್ಲಿ ಮಾಯವಾಗುತ್ತವೆ ಎಂದು ಓದಿದ್ದೆನು. ಕಾರಣ ಇಷ್ಟೇ. ಆಕ್ಟಿವೇಟೆಡ್ ಚಾರ್ ಕೋಲ್ ಗೆ ಬ್ಯಾಕ್ಟೀರಿಯಾಗಳನ್ನು ಸಾಯಿಸುವ ಶಕ್ತಿ ಇದೆ. ಆದ್ದರಿಂದ ಗಾಯದ ಸುತ್ತ ಇದನ್ನು ಇಲ್ಲಿ ಉಂಟಾಗುವ ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತದೆ. ನಂತರ, ಗಾಯ ವಾಸಿಯಾಗದಂತೆ ಅಡ್ಡಿಯಾಗಿರುವ ವಿಷಕಾರಿ ಅಂಶಗಳನ್ನು ಹಾಗೂ ಗಾಯದ ಕೆಟ್ಟ ವಾಸನೆಯನ್ನು ಹೀರಿಕೊಂಡು ಗಾಯ ಬೇಗ ಗುಣವಾಗಲು ಸಹಾಯ ಮಾಡುತ್ತದೆ. ಚಾರ್ ಕೋಲ್ ಚಿಕಿತ್ಸೆಗಳು ಎಂಬ ಇಂಗ್ಲೀಷ್ ಪುಸ್ತಕದಲ್ಲಿ ಇದರ ಬಗ್ಗೆ ವಿವರಗಳಿವೆ.

ಹೀಗೆ ಗಾಯಕ್ಕೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಚಾರ್ ಕೋಲ್ ಪುಡಿಯನ್ನು ಹಚ್ಚಿ ಬ್ಯಾಂಡೇಡ್ ಮಾಡುತ್ತಿದ್ದೆನು. ಆಶ್ಚರ್ಯ! ನಾಲ್ಕನೆ ದಿನಕ್ಕೆ ಗಾಯದಲ್ಲಿ ಒಂದಿಷ್ಟು ನೋವೇ ಇಲ್ಲ. ಒತ್ತಿ ನೋಡಿದರೂ ನೋವಿಲ್ಲ. ಗಾಯವು ಸಂಪೂರ್ಣ ಗುಣವಾಗಿತ್ತು. ಎಳೆಯ ಚರ್ಮ ಸೂಕ್ಷ್ಮವಾಗಿರುತ್ತದೆ ಎಂದು ಒಂದುವಾರ ಖಾಲಿ ಬ್ಯಾಂಡೇಡ್ ಕಟ್ಟಿಕೊಂಡು ಓಡಾಡಿದೆ. ಗಾಯವನ್ನು ಗುಣಪಡಿಸಲು ಈ ಇದ್ದಿಲಿನ ಪುಡಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದು ನನ್ನ ದೇಹದ ಮೇಲಿನ ಅನುಭವವ ಮಾತ್ರ ಇದನ್ನು ಯಾರಿಗೂ ನಾನು ಶಿಫಾರಸ್ಸು ಮಾಡುತ್ತಿಲ್ಲ.

ಗುಣಮಟ್ಟದ ವರ್ಜಿನ್ ಕೋಕೊನಟ್ ಆಯಿಲ್ ಬೇಕಾಗಿದ್ದರೆ ನನ್ನ ಸಂಪರ್ಕಿಸಿರಿ: 8088890138. ನಾನು ರೈತರನಾಗಿ ನನ್ನ ತೆಂಗಿನ ಮರದ ಕಾಯಿಗಳಿಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದ್ದೇನೆ. ತೆಂಗು ಬೆಳೆಗಾರರನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here