ಕೇರಳದಲ್ಲಿ ಆರಂಭವಾದ ಜೀವದಾಯಿನಿ ಮುಂಗಾರು ಮಳೆ ನರ್ತನ

0

ಕೇರಳದಲ್ಲಿ ಇಂದು, ನೈಋತ್ಯ ಮುಂಗಾರು. ಮೇ 24, 2025 ರಂದು ಪ್ರವೇಶಿಸಿದೆ. ಇದು ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ವಾಡಿಕೆಗಿಂತ ಭಿನ್ನವಾಗಿದೆ. ಹೀಗಾಗಿ, ನೈಋತ್ಯ ಮಾನ್ಸೂನ್ ಕೇರಳದಲ್ಲಿ ಸಾಮಾನ್ಯ ದಿನಾಂಕಕ್ಕಿಂತ 8 ದಿನಗಳ ಮೊದಲು ಪ್ರವೇಶಿಸಿದೆ. 2009 ರ ನಂತರ ಕೇರಳದಲ್ಲಿ ಮುಂಗಾರು ಮಳೆಯ ಮೋಹಕ ನರ್ತನ ಬೇಗನೇ ಆರಂಭವಾಗಿದೆ. 2009ನೇ ಇಸ್ವಿಯಲ್ಲಿ ಮೇ 23 ರಂದು ಕೇರಳವನ್ನು ಪ್ರವೇಶಿಸಿತ್ತು.

ಬಂಗಾಳಕೊಲ್ಲಿಯಲ್ಲಿ ಬಲಗೊಂಡ ಪಶ್ಚಿಮ ಗಾಳಿ ಮತ್ತು ಕಡಿಮೆ ಒತ್ತಡದ ವ್ಯವಸ್ಥೆಗಳಿಂದಾಗಿ ಸಾಮಾನ್ಯವಾಗಿ  ಜೂನ್ 1 ರಂದು ಆರಂಭವಾಗುವ ಮುಂಗಾರು ಮಳೆಯು ಮುಂಚಿತವಾಗಿ ಮೇ 27, 2025 ರಂದು ಕೇರಳಕ್ಕೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ನಿರೀಕ್ಷೆ- ಅಂದಾಜು ಮೀರಿ

ಮುಂಗಾರು ಮಳೆಯ ಪರಿಣಾಮಗಳು

2025 ರ ನೈಋತ್ಯ ಮಾನ್ಸೂನ್, ಭಾರತದ ಹೆಚ್ಚಿನ ಭಾಗಗಳಿಗೆ (ಈಶಾನ್ಯ ಭಾರತ ಮತ್ತು ಕೇರಳದ ಕೆಲವು ಭಾಗಗಳನ್ನು ಹೊರತುಪಡಿಸಿ) ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ತರುತ್ತದೆ ಎಂದು ಅಂದಾಜಿಸಲಾಗಿದೆ, ಇದು ಕೃಷಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.  ಭಾರತದ ವಾರ್ಷಿಕ ಮಳೆಯ  ಶೇಕಡ 7೦ ರಷ್ಟು  ಮಾನ್ಸೂನ್ ಮಳೆಯೇ ಆಗಿರುತ್ತದೆ.  ಅದರ ಪ್ರಮುಖ ಪರಿಣಾಮಗಳು ಮುಂದಿವೆ.

ಬೆಳೆ ಇಳುವರಿ ಹೆಚ್ಚಳ:

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ಕೃಷಿ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ( ದೀರ್ಘಾವಧಿಯ ಸರಾಸರಿಯ 104%) ಖಾರಿಫ್ ಬೆಳೆಗಳಿಗೆ ಅನುಕೂಲವಾಗಿದೆ.  (ಉದಾಹರಣೆಗೆ ಅಕ್ಕಿ, ಜೋಳ, ದ್ವಿದಳ ಧಾನ್ಯಗಳು, ಹತ್ತಿ). ಸಾಕಷ್ಟು ನೀರಿನ ಲಭ್ಯತೆಯು ಬಿತ್ತನೆ/ನಾಟಿ  ಮತ್ತು  ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.  ನೀರಾವರಿ ಪ್ರದೇಶಗಳಲ್ಲಿ ಇಳುವರಿಯನ್ನು ಶೇಕಡ  10-15ರಷ್ಟು ಹೆಚ್ಚಿಸುತ್ತದೆ.

ಜಲಾಶಯ ಮರುಪೂರಣ: ಮಾನ್ಸೂನ್ ವ್ಯಾಪಕ ಮಳೆಯು ಜಲಾಶಯಗಳನ್ನು ಭರ್ತಿಗೊಳಿಸುತ್ತದೆ.  ಮಳೆಯಾಶ್ರಿತ ಪ್ರದೇಶಗಳಿಗೆ ನೀರಾವರಿ ಒದಗುತ್ತದೆ.  ರಬಿ ಋತುವಿನ ಬಿತ್ತನೆ/ನಾಟಿ (ಉದಾಹರಣೆಗೆ ಗೋಧಿ, ಸಾಸಿವೆ) ಸಮಯದಲ್ಲಿ ಬೆಳೆಗಳಿಗೆ ಪ್ರಯೋಜನಕಾರಿಯಾಗಿದೆ.

ಮಣ್ಣಿನ ತೇವಾಂಶ:

ಸಕಾಲಿಕ ಮಳೆಯಿಂದ ಹೆಚ್ಚಿದ ಮಣ್ಣಿನ ತೇವಾಂಶವು ಬೀಜ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ ಮತ್ತು ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಇದು ರೈತರು ಮಾಡುವ  ವೆಚ್ಚವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಬೆಳೆ ಉತ್ಪಾದನೆಯು ಆಹಾರ ಬೆಲೆಗಳನ್ನು ಸ್ಥಿರಗೊಳಿಸುತ್ತದೆ ಮತ್ತು ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ.

Southwest Monsoon has set in over Kerala, today the 24 th May 2025:

Southwest Monsoon has set in over Kerala today, the 24th May, 2025, against the normal date of 1st June. Thus, southwest monsoon has set in over Kerala 8 days before the normal date. This is the earliest date… pic.twitter.com/n9TcdkG3Ym

— India Meteorological Department (@Indiametdept) May 24, 2025

LEAVE A REPLY

Please enter your comment!
Please enter your name here