Tag: yagachi
ನಾವು, ನೀರನ್ನು ಕಂಡಕಂಡಲ್ಲಿ ಕೊಲ್ಲುತ್ತಿದ್ದೇವೆ
ಜಲ ಸಂಪತ್ತಿನ ಕೊಲೆ, ಕೇವಲ ಬೆಂಗಳೂರಿನಂತಹ ದೊಡ್ಡ ನಗರದಲ್ಲಷ್ಟೇ ಅಲ್ಲ, ಸಣ್ಣ ಪುಟ್ಟ ಪೇಟೆಗಳಲ್ಲೂ ನಡೆಯುತ್ತದೆ. ತನ್ನನ್ನು ಪೊರೆಯುವ ಜಲಮೂಲಗಳನ್ನು ಹಾಳುಗೆಡವುವುದು ಮನುಷ್ಯನ ಹಲವು ವ್ಯಾಧಿಗಳಲ್ಲೊಂದು. ಯಾವುದೇ ಪಟ್ಟಣದ ಬಳಿಯಲ್ಲೊಂದು ಹೊಳೆಯೋ, ನದಿಯೋ ಹರಿಯುತ್ತಿದೆಯೆಂದರೆ ಮನೆಯ ಬಚ್ಚಲಿನ ಪೈಪಿನಿಂದ ಹಿಡಿದು ಡ್ರೈನೇಜಿನ ತನಕ ಎಲ್ಲವನ್ನೂ ಹೊಳೆಗೆ ತಿರುಗಿಸಲಾಗುತ್ತದೆ.