19 ನೇ ಅಕ್ಟೋಬರ್ 2023/27ನೇ ಆಶ್ವೀಜ 1945 ಶಕ 0830 ಗಂಟೆಗಳಲ್ಲಿ ದಾಖಲಾದ ವೀಕ್ಷಣೆಯ ಸಾರಾಂಶ
ನೈರುತ್ಯ ಮುಂಗಾರು ಕರ್ನಾಟಕ ರಾಜ್ಯದಿಂದ 19.10.2023 ರಂದು ಹಿಂತೆಗೆದಿದೆ . ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು .
ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು.
ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಭಾಗಮಂಡಲ (ಕೊಡಗು ಜಿಲ್ಲೆ) 1 ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 36.5 ಡಿ.ಸೆ ಶಿರಾಳಿಯಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 17.5 ಡಿ.ಸೆ. ದಾವಣಗೆರೆಯಲ್ಲಿ ದಾಖಲಾಗಿದೆ.