ಹವಾಮಾನ ವೈಪರೀತ್ಯಗಳು ಬಾಲ್ಯವಿವಾಹಗಳ ಹೆಚ್ಚಳಕ್ಕೆ ಕಾರಣವಾಗುತ್ತವೆಯೇ ?

0
ಲೇಖಕರು: ಸೂಸನ್‌ ಚಾಕೋ

ಇಂಟರ್ನ್ಯಾಶನಲ್ ಸೋಶಿಯಲ್ ವರ್ಕ್ ಜರ್ನಲ್ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ತೀವ್ರ ಹವಾಮಾನ ವೈಪರೀತ್ಯ ಲಿಂಗ ಅಸಮಾನತೆ ಮತ್ತು ಬಡತನದಂತಹ ಅಂಶಗಳನ್ನು ತೀವ್ರಗೊಳಿಸುತ್ತದೆ. ಈ ಮೂಲಕ ಮಕ್ಕಳ ಬಲವಂತದ ಮದುವೆಯ (CEFM) ಹೆಚ್ಚಳಕ್ಕೆ ಕಾರಣವಾಗುತ್ತದೆ.

ಲಿಂಗ-ಆಧಾರಿತ ಹಿಂಸಾಚಾರ (GBV) ಮತ್ತು ಅಸಮಾನತೆಗಳು ತೀವ್ರ ಹವಾಮಾನ ವೈಪರೀತ್ಯ ಸಂದರ್ಭಗಳಲ್ಲಿ ಮತ್ತಷ್ಟೂ ಹೆಚ್ಚಾಗುತ್ತವೆ. ಹವಾಮಾನ ವೈಪರೀತ್ಯಗಳು ಮತ್ತು ವಿಪತ್ತುಗಳ ಸಮಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಸ್ಥಿತಿಯ ಮೇಲೆ ಇದು ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಅಭಿವೃದ್ಧಿ ಉಪಕ್ರಮಗಳು ಲಿಂಗ ಮತ್ತು ಇತರ ಸಾಮಾಜಿಕ ಅಸಮಾನತೆಗಳನ್ನು ಲೆಕ್ಕಹಾಕುವ ಸಂಘಟಿತ ಪ್ರಯತ್ನಗಳಿಲ್ಲದೆ ಲಿಂಗ ಅಸಮಾನತೆಗಳನ್ನು ಪುನರುತ್ಪಾದಿಸಬಹುದು ಅಥವಾ ನಿರ್ಲಕ್ಷಿಸಬಹುದು ಎಂದು ಅಧ್ಯಯನ ಎಚ್ಚರಿಸಿದೆ.

ಫಿಯೋನಾ ಸಿ ಡೊಹೆರ್ಟಿ ನೇತೃತ್ವದ ಯುನೈಟೆಡ್ ಸ್ಟೇಟ್ಸ್ನ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು 2010-2022 ರವರೆಗೆ ಪ್ರಕಟವಾದ 20 ಅಧ್ಯಯನಗಳ ವಿಮರ್ಶೆಯನ್ನು ಮಾಡಿದ್ದಾರೆ ಬರಗಳು, ಪ್ರವಾಹಗಳು ಮತ್ತು ಇತರ ತೀವ್ರ ಹವಾಮಾನ ವೈಪರೀತ್ಯ ಘಟನೆಗಳು ಕಡಿಮೆ ತಲಾದಾಯದ ದೇಶಗಳಲ್ಲಿ ಮಕ್ಕಳ ಬಲವಂತದ ಮದುವೆಗಳಿಗೆ ಕಾರಣವಾಗುತ್ತಿದೆ.
ಈ ಕುರಿತ ಅಧ್ಯಯನಗಳು ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಕೀನ್ಯಾ, ಇಂಡೋನೇಷ್ಯಾ, ಮಲಾವಿ, ನೇಪಾಳ, ತಾಂಜಾನಿಯಾ, ವಿಯೆಟ್ನಾಂ ಮತ್ತು ಉಪ-ಸಹಾರನ್ ಆಫ್ರಿಕಾ ದೇಶಗಳಲ್ಲಿ ನಡೆದಿವೆ.

ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ ಆರ್ಥಿಕ ದುರ್ಬಲತೆಗಳನ್ನು ಕಡಿಮೆ ಮಾಡಲು ಬಲವಂತದ ಬಾಲ್ಯ ವಿವಾಹಗಳನ್ನು (CEFM- child, early and forced marriage ) ನಿಭಾಯಿಸುವ ತಂತ್ರವಾಗಿ ಬಳಸಲಾಗಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ.

“ಬಾಲ್ಯ ವಿವಾಹವು ಆರ್ಥಿಕ ದುರ್ಬಲತೆ ಮತ್ತು ಕುಟುಂಬವು ವಿಪತ್ತಿನ ಕಾರಣದಿಂದಾಗಿ ಎದುರಿಸುತ್ತಿರುವ ಆಹಾರದ ಅಭದ್ರತೆಯನ್ನು ಕಡಿಮೆ ಮಾಡಲು ಒಂದು ನಿಭಾಯಿಸುವ ತಂತ್ರವಾಗಿ ಕಂಡುಬರುತ್ತದೆ” ಎಂದು ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪತ್ರಿಕಾ ಪ್ರಕಟಣೆಯಲ್ಲಿ ಡೊಹೆರ್ಟಿ ಉಲ್ಲೇಖಿಸಿದ್ದಾರೆ.

ಬಾಂಗ್ಲಾದೇಶದಲ್ಲಿ, 2009 ರಲ್ಲಿ ಐಲಾ ಚಂಡಮಾರುತದ ನಂತರ ಕುಟುಂಬದ ಆರ್ಥಿಕ ಮತ್ತು ಆಹಾರದ ಹೊರೆಯನ್ನು ಕಡಿಮೆ ಮಾಡಲು ಹೆಣ್ಣುಮಕ್ಕಳನ್ನು ಬೇಗನೆ ಮದುವೆ ಮಾಡಲಾಯಿತು. ಕೀನ್ಯಾದಲ್ಲಿ, ಬಾಲ ವಧುಗಳನ್ನು ಶ್ರಮದಾಯಕ ಕಾರ್ಮಿಕ ಕೆಲಸಗಳಲ್ಲಿ ತೊಡಗಿಸಲಾಗುತ್ತಿದೆ.
ಮಲಾವಿಯಲ್ಲಿ, ಬರಪೀಡಿತ ಪ್ರದೇಶಗಳಲ್ಲಿ ವಾಸಿಸುವವರಿಗೆ ಹೋಲಿಸಿದರೆ ಬರಗಾಲಕ್ಕೆ ಒಳಗಾದ ಪ್ರದೇಶಗಳ ಬಾಲಕಿಯರಿಗೆ ಬಲವಂತದ ಮದುವೆಗಳನ್ನು ಮಾಡಿಸಲಾಗುತ್ತಿದೆ. ವಧುವಿನ ಬೆಲೆ ಮತ್ತು ವರದಕ್ಷಿಣೆಯು CEFM ಮತ್ತು ಹವಾಮಾನ ವೈಪರೀತ್ಯದ ನಡುವೆ ಪ್ರಮುಖ ಅಂಶವಾಗಿದೆ.

ಉಪ-ಸಹಾರನ್ ಆಫ್ರಿಕಾ ಅಥವಾ ವಿಯೆಟ್ನಾಂನಲ್ಲಿ ವರನ ಕುಟುಂಬವು ವಧುವಿನ ಕುಟುಂಬಕ್ಕೆ ವಧುವಿನ ಬೆಲೆಯನ್ನು ಪಾವತಿಸುವುದು ಸ್ಥಳೀಯ ಸಂಪ್ರದಾಯವಾಗಿದೆ – ಬರ ಮತ್ತು ಮಳೆಯ ತೀವ್ರ ಕೊರತೆಗಳ ಸಂದರ್ಭದಲ್ಲಿ ಬಲವಂತದ ಬಾಲ ವಿವಾಹಗಳು ( CEFM ) ಹೆಚ್ಚಿಗೆ ನಡೆಯುವ ಸಾಧ್ಯತೆಗಳು ಇರುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಂತಹ ವರದಕ್ಷಿಣೆ ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ (ವಧುವಿನ ಕುಟುಂಬವು ವರನಿಗೆ ಪಾವತಿಸುವುದು) ಬರಗಾಲದ ವರ್ಷದಲ್ಲಿ ಹುಡುಗಿಯರು ಮದುವೆಯಾಗುವುದು ಕಡಿಮೆ, ಏಕೆಂದರೆ ವಧುವಿನ ಕುಟುಂಬವು ವರದಕ್ಷಿಣೆ ಪಾವತಿಯನ್ನು ನೀಡುವುದು ಸಾಧ್ಯವಾಗಿರುವುದಿಲ್ಲ.

ಹಲವಾರು ಅಧ್ಯಯನಗಳಲ್ಲಿ, ಹೆಣ್ಣು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಮತ್ತು ಕುಟುಂಬದ ಅವಮಾನವನ್ನು ತಪ್ಪಿಸಲು ಪೋಷಕರು ಬಲವಂತದ ಬಾಲ್ಯ ವಿವಾಹಗಳನ್ನು ( CEFM )ಅವಲಂಬಿಸಿರುವುದು ಕಂಡು ಬಂದಿದೆ. ಬಿಕ್ಕಟ್ಟಿನ ಸಮಯದಲ್ಲಿ, ವಿಶೇಷವಾಗಿ ವಲಸೆ ಶಿಬಿರಗಳು ಅಥವಾ ತಾತ್ಕಾಲಿಕ ಆಶ್ರಯಗಳಲ್ಲಿ ಲೈಂಗಿಕ ಆಕ್ರಮಣದ ಪ್ರಕರಣಗಳು ಹೆಚ್ಚಾಗಿರುವುದು ಸಹ ಅಧ್ಯಯನದಿಂದ ತಿಳಿದು ಬಂದಿದೆ.
ಬಾಲ್ಯ ವಿವಾಹದ ಮುಖ್ಯ ಚಾಲಕ ಪ್ರೇರಣೆ ಎಂದರೆ ಲಿಂಗ ಅಸಮಾನತೆ. ಇದನ್ನು ನಿವಾರಿಸುವಲ್ಲಿ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯು ಮಹಿಳೆಯರು ಮತ್ತು ಬಾಲಕಿಯರನ್ನು ಸಬಲೀಕರಣಗೊಳಿಸಲು ಪ್ರಮುಖವಾಗಿದೆ ಮತ್ತು ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಭಾರತ ಮತ್ತು ಮಲಾವಿಯಲ್ಲಿ ಪೋಷಕರ ಶಿಕ್ಷಣವು ಹೆಚ್ಚಾದಂತೆ ಬಲವಂತದ ಬಾಲ್ಯ ವಿವಾಹ ಸಂಭವನೀಯತೆ ಕಡಿಮೆಯಾಗಿದೆ.
ಪ್ರತಿ ವರ್ಷ 12 ಮಿಲಿಯನ್ ಹುಡುಗಿಯರು ಪ್ರೌಢಾವಸ್ಥೆಯ ಮೊದಲು ಬಲವಂತದ ಮದುವೆಗೆ ತಳಲ್ಪಡುತ್ತಾರೆ . ಸರ್ಕಾರ, ಸಂಸ್ಥೆಗಳ ಕಾರಣಗಳಿಂದ ಇಂಥ ಪ್ರಕರಣಗಳು ಕುಸಿದಿದ್ದರೂ ತೀವ್ರ ಹವಾಮಾನ ವೈಪರೀತ್ಯದ ಕಾರಣದಿಂದ ಹೆಚ್ಚಾಗುವ ಅಪಾಯದಲ್ಲಿದೆ. ಫೆಬ್ರವರಿ 20, 2023 ರ ಡೌನ್ ಟು ಅರ್ಥ್ ವರದಿಯು, COVID-19 ಮತ್ತು ಬಡತನವು ಭಾರತದಲ್ಲಿ ಬಾಲ್ಯವಿವಾಹಗಳನ್ನು ಹೇಗೆ ಉತ್ತೇಜಿಸಿದೆ ಎಂಬುದನ್ನು ಅಧ್ಯಯನ ಮಾಡಿದೆ.

ಗ್ಲೋಬಲ್ ಸ್ಲೇವರಿ ಇಂಡೆಕ್ಸ್ 2023 ವರದಿಯು, ಹವಾಮಾನ ಬದಲಾವಣೆಯು ಇತರ ಪರಿಸರ ಅಂಶಗಳೊಂದಿಗೆ ಆಫ್ರಿಕಾದಲ್ಲಿ ಆಧುನಿಕ ಗುಲಾಮಗಿರಿಯನ್ನು ಉಲ್ಬಣಗೊಳಿಸಿದೆ ಎಂದು ಹೇಳಿದೆ. 3.1 ಮಿಲಿಯನ್ಗಿಂತಲೂ ಹೆಚ್ಚು ಆಫ್ರಿಕನ್ನರು ಬಲವಂತದ ಮದುವೆಗೆ ಒಳಗಾಗುತ್ತಿದ್ದಾರೆ ಜೊತೆಗೆ 3.8 ಮಿಲಿಯನ್ಗಿಂತಲೂ ಹೆಚ್ಚು ಬಾಲಕಿಯರು ಬಲವಂತದ ದುಡಿಮೆಯಲ್ಲಿದ್ದಾರೆ.

ತಮ್ಮ ಹದಿಹರೆಯದ ಆರಂಭಿಕ ಅಥವಾ ಕೊನೆಯಲ್ಲಿ ಹುಡುಗಿಯರು ಬಾಲ್ಯವಿವಾಹಕ್ಕೆ ಹೆಚ್ಚು ಗುರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಶಿಕ್ಷಣವು ಅಡೆತಡೆಯಿಲ್ಲದೆ ನಡೆಯುವುದನ್ನು ಮತ್ತು ಅವರು ಸಾಕಷ್ಟು ಪೌಷ್ಟಿಕಾಂಶವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದರಿಂದ ಈ ವಿಷಮ ಚಕ್ರವನ್ನು ಮುರಿಯುವಲ್ಲಿ ಸಹಾಯಕವಾಗುತ್ತದೆ.

ಅಂತರರಾಷ್ಟ್ರೀಯ ಒಪ್ಪಂದಗಳು ಬಾಲ್ಯ ವಿವಾಹದ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತವೆ. ಉದಾಹರಣೆಗೆ, ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ತಾರತಮ್ಯಗಳ ನಿರ್ಮೂಲನದ ಸಮಾವೇಶವು ಆರ್ಟಿಕಲ್ 16 ರಲ್ಲಿ ಬಾಲ್ಯ ವಿವಾಹದಿಂದ ರಕ್ಷಣೆಯ ಹಕ್ಕುಗಳನ್ನು ಒಳಗೊಂಡಿದೆ.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಇತರ ಅಂತರರಾಷ್ಟ್ರೀಯ ಒಪ್ಪಂದಗಳು: ಮದುವೆಗೆ ಕನಿಷ್ಠ ವಯಸ್ಸು ನಿಗದಿ ಮತ್ತು ಮದುವೆಗಳ ನೋಂದಣಿ
ಆರೋಗ್ಯ ಕ್ಷೇತ್ರದಲ್ಲಿರುವ ವೃತ್ತಿಪರರು ಮತ್ತು ಸಾಮಾಜಿಕ ಕಾರ್ಯಕರ್ತರು ಬಾಲ್ಯ ವಿವಾಹ ಮತ್ತು ಹವಾಮಾನ ವೈಪರೀತ್ಯದ ನಡುವಿನ ಸಂಕೀರ್ಣತೆಗಳು ಮತ್ತು ಸಂಬಂಧಗಳನ್ನು ಗುರುತಿಸಬೇಕು. ಇಲಲದಿದ್ದರೆ ಬಲವಂತದ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಬಹುದು ಎಂದು ಅಧ್ಯಯನವು ಎಚ್ಚರಿಸಿದೆ.

LEAVE A REPLY

Please enter your comment!
Please enter your name here