ಮಾರ್ಚ್ ೨೯ರಂದು ದಾಖಲಾಗಿರುವ ಹವಾಮಾನ ಸಾರಂಶ: ರಾಜ್ಯದಲ್ಲಿ ಒಣಹವೆ ಮುಂದುವರಿದಿತ್ತು. ಗರಿಷ್ಠ ಉಷ್ಣಾಂಶ ಕಲ್ಬುರ್ಗಿಯಲ್ಲಿ ೩೮.೯ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಟ ಉಷ್ಣಾಂಶ ಬಾಗಲಕೋಟೆಯಲ್ಲಿ ೧೪ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶ ೩೨ ರಿಂದ ೩೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಒಳನಾಡಿನಲ್ಲಿ ೩೫ ರಿಂದ ೩೯ ಡಿಗ್ರಿ, ದಕ್ಷಿಣ ಒಳನಾಡಿನಲ್ಲಿ ೩೧ ರಿಂದ ೩೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮುಂದಿನ ಎರಡು ದಿನಕ್ಕೆ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚು ಬದಲಾವಣೆಯಾಗುವ ಸಾಧ್ಯತೆ ಇರುವುದಿಲ್ಲ. ಏಕೆಂದರೆ ಕರಾವಳಿಯಲ್ಲಿ ಇದು ೩೨ ರಿಂದ ೩೪ ಡಿಗ್ರಿ ಸೆಲ್ಸಿಯಸ್ ದಕ್ಷಿಣ ಒಳನಾಡಿನಲ್ಲಿ ೩೨ ರಿಂದ ೩೮ ಡಿಗ್ರಿ, ನಾಳೆ ೩೦ ರಿಂದ ೩೮ ಡಿಗ್ರಿ ಸೆಲ್ಸಿಯಸ್ ಅಂತರದಲ್ಲಿ ವರದಿಯಾಗುವ ಸಾಧ್ಯತೆಗಳಿವೆ.
ಕರಾವಳಿಯಲ್ಲಿ ನಿನ್ನೆ ಕನಿಷ್ಟ ಉಷ್ಣಾಂಶ ೧೮ ರಿಂದ ೨೪ ಡಿಗ್ರಿ ಸೆಲ್ಸಿಯಸ್ ಇತ್ತು. ಉತ್ತರ ಒಳನಾಡಿನಲ್ಲಿ ೧೪ ರಿಂದ ೨೨ ಡಿಗ್ರಿ ಸೆಲ್ಸಿಯಸ್, ದಕ್ಷಿಣ ಒಳನಾಡಿನಲ್ಲಿ ೧೩ ರಿಂದ ೨೪ ಡಿಗ್ರಿ ಸೆಲ್ಸಿಯಸ್ ಅಂತರದಲ್ಲಿ ವರದಿಯಾಗಿದೆ.
ಮುಂದಿನ ಎರಡು ದಿನದಲ್ಲಿ ಕನಿಷ್ಟ ಉಷ್ಣಾಂಶದಲ್ಲಿ ಬದಲಾವಣೆ ಇಲ್ಲ. ಕರಾವಳಿಯಲ್ಲಿ ಇವತ್ತು ೧೮ ರಿಂದ ೨೨ ಡಿಗ್ರಿ ಸೆಲ್ಸಿಯಸ್, ನಾಳೆ ೧೬ ರಿಂದ ೨೨ ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಇಂದು ಮತ್ತು ನಾಳೆ ಇದು ೧೬ ರಿಂದ ೨೪ ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಇದೇ ಪ್ರಮಾಣ ಇರುವ ಸಾಧ್ಯತೆ ಇದೆ.
ಇಂದಿನ ವಾತಾವರಣದ ಮುಖ್ಯಾಂಶಗಳು: ಇಂದು ಸಮುದ್ರಮಟ್ಟದಿಂದ ೯೦೦ ಮೀಟರ್ ಎತ್ತರದಲ್ಲಿ ಗಾಳಿದಿಕ್ಕಿನ ಬದಲಾವಣೆಯಾಗಿದೆ. ಹೀಗೆಂದರೆ ಪಶ್ಚಿಮ ಭಾಗದಲ್ಲಿ ಗಾಳಿಯು ವಾಯುವ್ಯ ದಿಕ್ಕಿನಿಂದ ಬೀಸುತ್ತಿರುತ್ತದೆ. ಪೂರ್ವಭಾಗದಲ್ಲಿ ಇದು ಈಶಾನ್ಯ ದಿಕ್ಕಿನಿಂದ ಬೀಸುತ್ತಿರುತ್ತದೆ.
ಈ ಎರಡು ದಿಕ್ಕಿನ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುವುದಕ್ಕೆ ಗಾಳಿದಿಕ್ಕಿನ ಬದಲಾವಣೆ ಎನ್ನುತ್ತಾರೆ. ಇದರಿಂದ ಲೈನ್ ಆಫ್ ಡಿಸ್ ಕಂಟಿನ್ಯೂಟಿಯಾಗುತ್ತದೆ. ಮಧ್ಯ ಪ್ರದೇಶದಿಂದ ಆರಂಭಿಸಿ ತಮಿಳುನಾಡು, ವಿದರ್ಭ, ತೆಲಂಗಾಣ, ರಾಯಲಸೀಮಾ ಮೂಲಕ ಹಾದು ಹೋಗುತ್ತದೆ.
ಈ ರೀತಿಯ ವಾತಾವರಣ ಇರುವ ಸಂದರ್ಭದಲ್ಲಿ ಪೂರ್ವಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುತ್ತದೆ. ಪಶ್ಚಿಮ ಭಾಗದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇರುತ್ತದೆ.
ಮುಂದಿನ ಐದು ದಿನಕ್ಕೆ ರಾಜ್ಯಕ್ಕೆ ಮಳೆಯ ಮುನ್ಸೂಚನೆ: ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಇವತ್ತಿನಿಂದ ಮುಂದಿನ ಐದು ದಿನದವರೆಗೆ ಒಣಹವೆ ಮುಂದುವರಿಯುವ ಸಾಧ್ಯತೆ ಇರುತ್ತದೆ. ದಕ್ಷಿಣ ಒಳನಾಡಿನಲ್ಲಿ ಇವತ್ತಿನಿಂದ ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇರುತ್ತದೆ.
ಬೆಂಗಳೂರು ನಗರದ ಹವಾಮಾನ: ಇವತ್ತು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಹಗುರ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುತ್ತದೆ. ಏಪ್ರಿಲ್ ೧ ಮತ್ತು ೨ನೇ ತಾರೀಖುಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇರುತ್ತದೆ.
ನಿನ್ನೆ ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ ೩೫. ೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕನಿಷ್ಟ ೨೩. ೪ ಇತ್ತು. ಹೆಚ್. ಎ. ಎಲ್. ವಿಮಾನ ನಿಲ್ದಾಣದಲ್ಲಿ ಗರಿಷ್ಠ ೩೪, ಕನಿಷ್ಟ ೨೨. ೪ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಪ್ರದೇಶಧಲ್ಲಿ ಮಾರ್ಚ್ ೧ನೇ ತಾರೀಖಿನಿಂದ ಇಂದಿನ ತನಕ ೨೦ ಮಿಲಿ ಮೀಟರ್ ಮಳೆ ವರದಿಯಾಗಿದೆ. ಸಾಮಾನ್ಯ ೯ ಹೆಚ್ಚು ಎಂದರೆ ೧೧ ಆಗಿದೆ. ಅಂತರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ನಿನ್ನೆ ಗರಿಷ್ಠ ೩೫. ೬, ಕನಿಷ್ಟ ೨೨.೮ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಹವಾಮಾನ ಮುನ್ಸೂಚನೆ: ಆಕಾಶವು ಮೋಡವಾಗಿರುತ್ತದೆ. ಸಂಜೆ ಅಥವಾ ರಾತ್ರಿಗೆ ಒಂದೆರಡು ಕಡೆ ಹಗುರ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಟ ಉಷ್ಣಾಂಶ ಕ್ರಮವಾಗಿ ೩೪ ಮತ್ತು ೨೪ ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ನಾಳೆ ಆಕಾಶವು ಭಾಗಶಃ ಮೋಡವಾಗಿರುತ್ತದೆ. ಗರಿಷ್ಠ ಮತ್ತು ಕನಿಷ್ಟ ಉಷ್ಣಾಂಶ ಕ್ರಮವಾಗಿ ೩೪ ಮತ್ತು ೨೩ ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.