ಅಜೋಲ ನೀರಿನ ಮೇಲೆ ಬೆಳೆಯುವ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಳ ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುತ್ತದೆ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (ಂದಠಟಚಿ ಠಿಟಿಟಿಚಿಣಚಿ) ಮತ್ತು ಇದು ಅಜೋಲೆಸಿ (ಂದಠಟಚಿಛಿಜಚಿಜ) ಕುಟುಂಬಕ್ಕೆ ಸೇರಿದೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ, ಮಲೆನಾಡಿನ ಸೆರಗಿನಲ್ಲಿ ಮನೆಯ ಮೇಲೆ, ದಾರಿ ಪಕ್ಕದಲ್ಲಿ ಕಲ್ಲಿನ ಮೇಲೆ ಕಂಡು ಬರುತ್ತದೆ.
ಈ ವರ್ಗದ ಸಸ್ಯದಲ್ಲಿ ಸಸಾರಜನಕ ಮತ್ತು ಪ್ರೋಟಿನ್ ಅಂಶ ಅಧಿಕವಾಗಿದ್ದು, ಸ್ವಲ್ಪವೆ ಸ್ವಲ್ಪ ಪಶು ಆಹಾರದ ಜತೆಗೆ ಮಿಶ್ರಣಮಾಡಿ ಕೊಡಬಹುದು. ಅಜೋಲ ದನ-ಕರುಗಳಿಗೆ ಒಂದು ಉತ್ತಮ ಆಹಾರ, ಮಲೆನಾಡ ಅಂಗಳದಲ್ಲಿಯೂ ಸಹ ಬೆಳೆಯಬಹುದು. ಕನಕಪುರ ತಾಲ್ಲುಕು ಮರಳವಾಡಿ ಗ್ರಾಮದ ಪಕ್ಕದಲ್ಲಿ ಗ್ರೀನ್ ಪ್ರತಿಷ್ಠಾನ ವತಿಯಿಂದ ಸುಮಾರು ಮಂದಿ ರೈತರು ತಮ್ಮ ತಮ್ಮ ಜಾಗದಲ್ಲಿ ಅಜೋಲವನ್ನು ಬೆಳೆಯುತ್ತಿದ್ದಾರೆ.
ಬೆಳೆಯುವ ವಿಧಾನ: ಸುಮಾರು ಮೂರು ಅಡಿ ಅಗಲ, ಒಂದು ಅಡಿ ಆಳ, ಮತ್ತು ಉದ್ದ ಅವರವರ ಅನುಕೂಲ ತಕ್ಕಂತೆ (ಬೆಳೆಯುವ ಪ್ರಮಾಣ ನೋಡಿಕೊಂಡು) ಗುಂಡಿಯನ್ನು ತೆಗೆಯಬೇಕು ಅಥವಾ ಸಿಮೆಂಟ್ ತೊಟ್ಟಿಯನ್ನು ಕಟ್ಟಿಕೊಳ್ಳಬಹುದು. ತೆಗೆದ ಗುಂಡಿ ಅಥವಾ ತೊಟ್ಟಿಗೆ ಪ್ಲಾಸ್ಟಿಕ್ ಹಾಳೆಯನ್ನು ಹಾಸಬೇಕು, ನೀರು ಕೆಳಗೆ ಹೋಗದೆ ಹಾಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್ ಹಾಳೆಯುನ್ನು ಸುತ್ತಲೂ ಮಣ್ಣು ಮತ್ತು ಕಲ್ಲಿನಿಂದ ಬಿಗಿಗೊಳಿಸಬೇಕು. ಗುಂಡಿ ಅಥವಾ ತೊಟ್ಟಿಯ ಮೇಲೆ ಚಪ್ಪರವನ್ನು ಹಾಕಬೇಕು, ಇದರಿಂದ ಮಳೆ ನೀರು ಮತ್ತು ಬಿಸಿಲಿನಿಂದ ಅಜೋಲವನ್ನು ರಕ್ಷಿಸಬಹುದು.
ಪ್ಲಾಸ್ಟಿಕ್ ಹಾಳೆಯನ್ನು ಹಾಕಿದ ತೊಟ್ಟಿ ಅಥವಾ ಗುಂಡಿಯ ಮೇಲೆ ಪೂರ್ತಿಯಾಗಿ ನೀರು ತುಂಬಬೇಕು ಅದರ ಜೋತೆಗೆ ಸ್ವಲ್ಪ ಸಗಣಿ (1 ಕಿ.ಲೊ/ 2 ಕಿ.ಲೊ) ಮತ್ತು ತಿಳಿ ಮಣ್ಣನ್ನು ನೀರಿನಲ್ಲಿ ಹಾಕಿ ಕದಡಬೇಕು ಅಥವಾ ಮಿಶ್ರಣ ಮಾಡಬೇಕು, ನಂತರ ಅಜೋಲವನ್ನು ನೀರು ಹಾಕಿದ ತೊಟ್ಟಿ ಅಥವಾ ಗುಂಡಿಯಲ್ಲಿ ಬಿಡಬೇಕು. ನೀರು ಕಡಿಮೆಯಾದಂತೆ ಮತ್ತೆ ಮತ್ತೆ ನೀರನ್ನು ಹಾಕುತ್ತಿರಬೇಕು, ನೀರು ಸತತವಾಗಿ ತೊಟ್ಟಿ ಅಥವಾ ಗುಂಡಿಯಲ್ಲಿ ಇರಬೇಕು, ಇಲ್ಲದಿದ್ದರೆ ಅಜೋಲ ಬೆಳೆಯುದಿಲ್ಲ. 21 ರಿಂದ 30 ದಿನಗಳ ನಂತರ ಅಜೋಲವನ್ನು ತೆಗೆದು ಜಾನುವಾರುಗಳಿಗೆ ಕೊಡಬಹುದು.
ಮುನ್ನಚ್ಚರಿಕೆ ಕ್ರಮಗಳು: ಯಾವಗಲೂ ನೀರು ನಿಲ್ಲುವದರಿಂದ ಸೊಳ್ಳೆಗಳ ಸಂತತಿ ಅಭಿವೃದ್ಧಿ ಯಾಗಬಹುದು, ಸೂಕ್ತ ಕ್ರಮದೊಂದಿಗೆ ಸೊಳ್ಳೆಗಳನ್ನು ನಾಶಪಡಿಸಬೇಕು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾಯಿಸುವಾಗ ನೀರಿನಲ್ಲೆ ಸಾಗಿಸಬೇಕು. ಹತ್ತು ಅಡಿ ಉದ್ದ, ಮೂರು ಅಡಿ ಅಗಲ ಇರುವ ತೊಟ್ಟಿ/ಗುಂಡಿಯಿಂದ, ಪೂರ್ತಿಯಾಗಿ ಬೆಳೆದ ನಂತರ, ದಿನಲೂ ಒಂದು ಚದುರ ಅಡಿ ಜಾಗದಲ್ಲಿರುವ ಅಜೋಲವನ್ನು ತೆಗೆದು ಜಾನುವಾರುಗಳಿಗೆ ತಿನ್ನಿಸಬೇಕು. ಅತಿ ಹೆಚ್ಚಿಗೆ ಅಜೋಲವನ್ನು ತಿನ್ನಿಸಬಾರದು, ಒಂದು ಸಾಮನ್ಯ ಹಸುವಿಗೆ ಎರಡು ಬೊಗಸೆಯಷ್ಟು ಅಜೋಲವನ್ನು ಪಶು ಆಹಾರದ ಜೋತೆಗೆ ತಿನ್ನಿಸಬೇಕು
ಅನೇಕ ರೈತರು ತಮಗೆ ಆದ ಲಾಭವನ್ನು ಮುಕ್ತಕಂಠದಿಂದ ವ್ಯಕ್ತಪಡಿಸಿದ್ದಾರೆ. ಅದರಲ್ಲಿ, ಮರಳವಾಡಿಯ ಗ್ರಾಮ ಪಕ್ಕದಲ್ಲಿ ನಾರಾಯಣ ಸ್ವಾಮಿ ಎಂಬ ರೈತ ಈ ಅಜೋಲವನ್ನ ಬೆಳೆಸುತ್ತಿದ್ದಾರೆ. ಈ ರೈತ ಹೇಳುವ ಪ್ರಕಾರ ಅಜೋಲವನ್ನ ಹಸುವಿಗೆ ಕೊಡುವ ಮೊದಲು ಎರಡು ಲೀಟರ್ ಹಾಲುಕೊಡುತ್ತಿತ್ತು ಆದರೆ, ಅಜೋಲವನ್ನು ಕೊಟ್ಟ ಒಂದು ತಿಂಗಳ ನಂತರ ಮೂರು ಲೀಟರ್ ಹಾಲು ಕೊಡಲು ಪ್ರಾರಂಭಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.