ಹವಾಮಾನ ವರದಿ: ಭಾರೀ ಮಳೆ ಮುನ್ನೆಚ್ಚರಿಕೆ

0

ಮುಂದಿನ 24 ಘಂಟೆಗಳು:  ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:  ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರಿಗೆ ಎಚ್ಚರಿಕೆ  ಇಲ್ಲ. ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ: ಇಲ್ಲ.

21 ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ  ಮಳೆ/ಗುಡುಗಿನಿಂದ ಕೂಡಿದ  ಮಳೆ , ಒಮೊಮ್ಮೆ ಭಾರಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ  ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

21 ನೇ ಅಕ್ಟೋಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಬಹುತೇಕ  ಕಡೆಗಳಲ್ಲಿ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿಯ  ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ  ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:   ದಕ್ಷಿಣ ಒಳನಾಡಿನ ಬಹುತೇಕ  ಕಡೆಗಳಲ್ಲಿ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿಯ  ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ  ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಗುಡುಗು ಮುನ್ಸೂಚನೆ: 

ಮುಂದಿನ 48 ಘಂಟೆಗಳು:   ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಬಹಳಷ್ಟು ಸಾಧ್ಯತೆ ಇದೆ.

==============

ಬುಧವಾರ, 19ನೇ ಅಕ್ಟೋಬರ್ 2022 / 27 ನೇ ಆಶ್ವೀಜ 1943  ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಒಳನಾಡಿನಲ್ಲಿ ಚುರುಕಾಗಿತ್ತು. ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿದೆ

ಅತಿ ಭಾರೀ ಮಳೆಯ ಪ್ರಮಾಣ ಸೆಂ.ಮಿ : ದೇವರಹಿಪ್ಪರಗಿ (ವಿಜಯಪುರ ಜಿಲ್ಲೆ) 12. ಭಾರೀ ಮಳೆಯ ಪ್ರಮಾಣ ಸೆಂ.ಮಿ : ಮದ್ದೂರು (ಮಂಡ್ಯ ಜಿಲ್ಲೆ ) 8; ಮಧುಗಿರಿ (ತುಮಕೂರು ಜಿಲ್ಲೆ), ಹೆಸರಘಟ್ಟ (ಬೆಂಗಳೂರು ನಗರ ಜಿಲ್ಲೆ) ತಲಾ 7.

ಇತರೆ ಪ್ರಮುಖ ಮಳೆ ಪ್ರಮಾಣ (ಸೆಂ.ಮಿ): ಬಾದಾಮಿ (ಬಾಗಲಕೋಟೆ ಜಿಲ್ಲೆ) 6;ನರಗುಂದ (ಗದಗ ಜಿಲ್ಲೆ), ಶ್ರವಣಬೆಳಗೊಳ (ಹಾಸನ ಜಿಲ್ಲೆ), ಮಿಡಿಗೇಶಿ (ತುಮಕೂರು ಜಿಲ್ಲೆ), ಮಾಲೂರು (ಕೋಲಾರ ಜಿಲ್ಲೆ), ಕನಕಪುರ (ರಾಮನಗರ ಜಿಲ್ಲೆ) ತಲಾ 5; ಹೊನ್ನಾಳಿ (ದಾವಣಗೆರೆ ಜಿಲ್ಲೆ), ಎಂಪ್ರಿ (ಬೆಂಗಳೂರು ನಗರ ಜಿಲ್ಲೆ) ತಲಾ 4; ಕಾರ್ಕಳ ,ಸಿದ್ದಾಪುರ, ಕೋಟ (ಎಲ್ಲ ಉಡುಪಿ ಜಿಲ್ಲೆ), ರಾಯಚೂರು, ಕುಷ್ಟಗಿ (ಕೊಪ್ಪಳ ಜಿಲ್ಲೆ), ಜನವಾಡ, ನಿಟ್ಟೂರು (ಎರಡೂ ಬೀದರ್ ಜಿಲ್ಲೆ), ಲೋಕಾಪುರ, ಬಿಳಗಿ (ಬಾಗಲಕೋಟೆ ಜಿಲ್ಲೆ), ಸಂಡೂರ್, ಕುರುಗೋಡು (ಎರಡೂ ಬಳ್ಳಾರಿ ಜಿಲ್ಲೆ), ಬರಗೂರು (ತುಮಕೂರು ಜಿಲ್ಲೆ) ಮಂಡ್ಯ, ಬೆಂಗಳೂರು ನಗರ, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಹಾಸನ, ಚಿಕ್ಕನಹಳ್ಳಿ (ತುಮಕೂರು ಜಿಲ್ಲೆ) ಯಗಟಿ (ಚಿಕ್ಕಮಗಳೂರು ಜಿಲ್ಲೆ) ತಲಾ 3;ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಔರಾದ್, ಭಾಲ್ಕಿ (ಎರಡೂ ಬೀದರ್ ಜಿಲ್ಲೆ), ಅಣ್ಣಿಗೆರೆ (ಧಾರವಾಡ ಜಿಲ್ಲೆ), ಸುತಗಟ್ಟಿ ಮಟ್ಟಿಕೊಪ್ಪ (ಬೆಳಗಾವಿ ಜಿಲ್ಲೆ), ಕೆರೂರು (ಬಾಗಲಕೋಟೆ ಜಿಲ್ಲೆ), ರಾಮನಗರ, ಜ್ಞಾನಭಾರತಿ ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ), ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಚಿಂತಾಮಣಿ, ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ), ಸಿರಾ (ತುಮಕೂರು ಜಿಲ್ಲೆ), ಚಿಕ್ಕಬಳ್ಳಾಪುರ, ಶಿಡ್ಲಘಟ್ಟ (ಚಿಕ್ಕಬಳ್ಳಾಪುರ ಜಿಲ್ಲೆ), ಜಿಕೆವಿಕೆ ತಲಾ 2; ಬೇಲಿಕೇರಿ, ಕ್ಯಾಸಲ್ ರಾಕ್ (ಎರಡೂ ಉತ್ತರ ಕನ್ನಡ ಜಿಲ್ಲೆ), ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಕಲಬುರ್ಗಿ, ಬಾಗಲಕೋಟೆ ರದ್ದೇವಾಡಗಿ, ಹಾವೇರಿ, ಬಾಗಲಕೋಟೆ, ಗುತ್ತಲ್ (ಹಾವೇರಿ ಜಿಲ್ಲೆ), ಹಲಬರ್ಗಾ (ಬೀದರ್ ಜಿಲ್ಲೆ), ರೋಣ (ಗದಗ ಜಿಲ್ಲೆ), ಸಿಂದಗಿ (ವಿಜಯಪುರ ಜಿಲ್ಲೆ), ಕುಡತಿನಿ ,ಕೂಡ್ಲಿಗಿ (ಎರಡೂ ಬಳ್ಳಾರಿ ಜಿಲ್ಲೆ), ಚಾಮರಾಜನಗರ, ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ), ಹೆಬ್ಬೂರು, ಗುಬ್ಬಿ (ಎರಡು ತುಮಕೂರು ಜಿಲ್ಲೆ) , ತ್ಯಾಗರ್ತಿ (ಶಿವಮೊಗ್ಗ ಜಿಲ್ಲೆ) ತಲಾ 1

ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 33.6 ಡಿ.ಸೆ. ಬಳ್ಳಾರಿಯಲ್ಲಿ  ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 18.6 ಡಿ.ಸೆ. ಬಾಗಲಕೋಟೆಯಲ್ಲಿ  ದಾಖಲಾಗಿದೆ.

LEAVE A REPLY

Please enter your comment!
Please enter your name here