ನಗರ ಪ್ರದೇಶಗಳಲ್ಲಿರುವ ಗಣನೀಯ ಸಂಖ್ಯೆ ಮಂದಿಗೆ ವೃತ್ತಿ ಜೊತೆ ಪ್ರವೃತ್ತಿಯಾಗಿ ಕೃಷಿ ಮಾಡುವ ಹಂಬಲವಿದೆ. ಕೆಲವರು ತಮ್ಮತಮ್ಮ ಊರುಗಳಲ್ಲಿ ಇರುವ ಜಮೀನು – ತೋಟಗಳಿಗೆ ವಾರಂತ್ಯದ ದಿನಗಳಲ್ಲಿ ಹೋಗಿ ಕೃಷಿ ಮಾಡುತ್ತಾರೆ. ಇವರಲ್ಲಿ ಕೆಲವರು ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ತಾವೇ ಮುಂದೆ ನಿಂತು ದುಡಿದರೆ ಇನ್ನೂ ಕೆಲವರು ಮಣ್ಣು ಮುಟ್ಟದೇ ಇತರರ ಮೇಲೆ ಅವಲಂಬಿತರಾಗಿ ಕೃಷಿ ಮಾಡಿಸುತ್ತಾರೆ.
ಮತ್ತೆ ಕೆಲವರಿಗೆ ಕೃಷಿ ಮಾಡುವ ಹೆಬ್ಬಯಕೆ ಇರುತ್ತದೆ. ಆದರೆ ಸ್ವಂತ ಜಮೀನಿರುವುದಿಲ್ಲ. ಭೋಗ್ಯಕ್ಕೆ ಹಾಕಿಸಿಕೊಂಡು ಕೃಷಿ ಮಾಡುವಂಥ ಅಪೇಕ್ಷೆಯುಳ್ಳವರು ಇರುತ್ತಾರಾದರೂ ಎಲ್ಲರಿಗೂ ಫಲವತ್ತಾದ ಜಮೀನು – ಹೊಲ ದೊರೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಇದೊಂಥರ ಹಲ್ಲಿದ್ದವರಿಗೆ ಕಡಲೇ ಇಲ್ಲ ಎನ್ನುವಂತೆ ಆಗಿದೆ.
ಪ್ರಸ್ತುತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವದೇಶಿ ಆಂದೋಲನ – ಗ್ರಾಮ ಸ್ವರಾಜ್ಯ – 2022ರ ಒಳಗೆ ಕೃಷಿ ಆದಾಯ ದ್ವಿಗುಣಗೊಳಿಸುವ ಮಾತುಗಳನ್ನು ಪದೇಪದೇ ಆಡುತ್ತಿದ್ದಾರೆ. ಕೊರೊನಾದಿಂದ ಉಂಟಾದ ಆರ್ಥಿಕ ಕುಸಿತದ ನಂತರ ಕೃಷಿ ಪುನಶ್ಚೇತನಕ್ಕೆ ಒಂದಷ್ಟು ಕಾರ್ಯಕ್ರಮ ಘೊಷಣೆ ಮಾಡಿದ್ದಾರೆ. ಇವೆಲ್ಲದರಿಂದ ನಗರ ಪ್ರದೇಶಗಳಲ್ಲಿ ಇರುವ ಕೃಷಿ ಆಸಕ್ತರಿಗೆ ಭಾರಿ ಭರವಸೆ ಮತ್ತು ಏನಾದರೂ ಮಾಡಬೇಕೆಂಬ ಆಶಾವಾದ ಚಿಗುರಿದೆ.
ಒಂದು ವಿಷಯ ಏನೆಂದರೆ ಕೃಷಿ ಮಾಡಬೇಕೆಂದು ಅಪೇಕ್ಷೆಯಿರುವವರಲ್ಲಿ ಕೆಲವರಿಗಾದರೂ ರೈತಾಪಿ ಸಂಕಷ್ಟಗಳ ಅರಿವಿರುವುದಿಲ್ಲ. ಬೆಂಗಳೂರಿನ ಹತ್ತು ಸಾವಿರ ರೂಪಾಯಿಗೆ ಚದರಡಿಯ ಮನೆಯಲ್ಲಿ ಕುಳಿತು ದಾಸವಾಳದ ಗಿಡವನ್ನು ಕುಂಡಲದಲ್ಲಿ ಹಾಕಿ ಬೆಳೆಸಿ ರೈತರ ಬಗ್ಗೆ ಮತ್ತು ಹುಸಿ ದೇಶಾಭಿಮಾನದ ಬಗ್ಗೆ ಮಾತನಾಡುವ – ಬರೆಯುವಂಥವರೂ ಇದ್ದಾರೆ. ಇಂಥವರು ಪ್ರಾಯೋಗಿಕವಾಗಿ ಕೃಷಿ ಮಾಡುವ ಕಾರ್ಯ ಮಾಡಬಹುದು.
ಈ ಎಲ್ಲ ಹಿನ್ನೆಲೆಯಲ್ಲಿ ಕೃಷಿ ಮಾಡಲು ಆಸಕ್ತಿ ಇರುವವರಿಗೆ ನನ್ನ ಮಟ್ಟದಲ್ಲಿ ಆಗುವ ಸಹಾಯ ಮಾಡಲು ನಿಶ್ಚಯಿಸಿದ್ದೇನೆ. ಪ್ರಾಮಾಣಿಕವಾಗಿ ದುಡಿಯುವ ಆಸಕ್ತಿಯಿದ್ದರೆ ನನ್ನ ತೋಟದ ಸ್ವಲ್ಪ ಜಾಗದಲ್ಲಿ ಸಾವಯವ ಕೃಷಿಪದ್ಧತಿ ಪ್ರಯೋಗಿಸಲು ಅವಕಾಶ ಮಾಡಿಕೊಡುತ್ತೇನೆ. ಇದರಿಂದ ಸಾವಯವ ಕೃಷಿ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿ ಕೃಷಿಕರಿಗೆ ಉಪಯೋಗವಾಗಬಲ್ಲ ಒಂದು ಸಿದ್ಧ ಸೂತ್ರವನ್ನು ಪ್ರಾತ್ಯಕ್ಷಿಕೆಯೊಂದಿಗೆ ನಿರ್ಮಿಸಿಕೊಡುವುದಲ್ಲದೆ ನಿಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು.
ಒಂದು ಸಾವಿರ ಫಲಕ್ಕೆ ಬಂದಿರುವ ತೆಂಗು, ಫಲಕ್ಕೆ ಬರಲಿರುವ ಎರಡು ಸಾವಿರ ಗೋಡಂಬಿ, ಎರಡು ಸಾವಿರ ಹೊಂಗೆ, ಎಂಟು ಬೋರ್ವೆಲ್ ಒಟ್ಟು 12 ಇಂಚಿಗೂ ಅಧಿಕ ನೀರು, ಕೃಷಿ ಹೊಂಡ, Varshajal ಮಳೆ ನೀರು ಕೊಯ್ಲು, ಚೆಕ್ ಡ್ಯಾಮ್ ಇರುವ ಹಳ್ಳ, ಸುಸಜ್ಜಿತ ಮನೆ ಎಲ್ಲಾ ಇದೆ. ಇದರಲ್ಲಿ ಎಕರೆ ಫಲಕ್ಕೆ ಬಂದಿರುವ, ಹನಿ ನೀರಾವರಿಯಿರುವ ಸುಮಾರು ಮೂವತ್ತು ತೆಂಗಿನ ಮರಗಳಿರುವ ತೋಟಕ್ಕೆ ವಾರ್ಷಿಕ ಕೇವಲ ಎಪ್ಪತ್ತು ಸಾವಿರ ರೂಪಾಯಿಯ ಬಾಡಿಗೆಗೆ ಕೊಡುತ್ತೇನೆ. ಒಂದು ಎಕರೆ ತೆಂಗಿನ ತೋಟಕ್ಕೆ ಹತ್ತು ಲಕ್ಷ ಬೆಲೆ ಕಟ್ಟಿ ಏಳು ಪ್ರತಿಶತ ಬಡ್ಡಿಯ ಲೆಕ್ಕದಲ್ಲಿ ಎಪ್ಪತ್ತು ಸಾವಿರ ವಾರ್ಷಿಕ ಬಾಡಿಗೆ ಫಿಕ್ಸ್ ಮಾಡಿದ್ದೇನಷ್ಟೇ.ಇದು ಕೊರೋನಾ ಕಾಲದ ನನ್ನ ಸ್ಪೆಷಲ್ ಆಫರ್! ನಗರ ನಿವಾಸಿಗಳಲ್ಲಿ ಆಸಕ್ತರು ತಮ್ಮ ದೇಶಭಕ್ತಿ, ಕೃಷಿಪ್ರೇಮ, ಸ್ವದೇಶಿ ಆಂದೋಲನದ ಸ್ಫೂರ್ತಿ ಇವೆಲ್ಲವನ್ನು ಎರಕ ಹೊಯ್ದು ನನ್ನ ನಿಮ್ಮೆಲ್ಲರ ಕೃಷಿ ಪ್ರಧಾನ ಭಾರತದ ಕನಸಿಗೆ ಕೈಜೋಡಿಸಬಹುದು.
ನಗರ ನಿವಾಸಿಗಳಲ್ಲಿ ಕೃಷಿ ಆಸಕ್ತರು ರವಿ ಹಂಜ್ ಅವರನ್ನು ಇಮೈಲ್ [email protected] ಮೂಲಕ ಸಂಪರ್ಕಿಸಿ. ಅವರು ನೀಡಿರುವ ಆಹ್ವಾನದ ಬಗ್ಗೆ ಚರ್ಚಿಸಬಹುದು
I want to start agriculture…
Please contact Ravi Hanj on email
Please share your mobile number.
I am interested.
Better to call me on my phone 8088202157.
9986206681.
Please contact Ravi Hanj on email