ಜಾಗತಿಕ ಆಹಾರ ಭದ್ರತೆಯಲ್ಲಿನ ಸಮಸ್ಯೆ ಚಿಂತನೆ

0

ಏಷಿಯನ್ PGPR (Plant Growth Promoting Regulators) ಸಂಘಟನೆಯ ಭಾರತೀಯ ಶಾಖೆ, ಬೆಂಗಳೂರಿನ ತೋ.ವಿ.ವಿ ಆವರಣದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತ್ರ ವಿಭಾಗದ ಸಹಯೋಗದಲ್ಲಿ “ಸಮಗ್ರ ಸಸ್ಯ ಆರೋಗ್ಯ ನಿರ್ವಹಣೆಗಾಗಿ ಪ್ರಯೋಜನಕಾರಿ ಸೂಕ್ಷ್ಮಜೀವಿಗಳು”ರಾಷ್ಟ್ರೀಯ ಸಮ್ಮೇಳನ ಚಾಲನೆಗೊಂಡಿದೆ.

8ನೇ ಏಷ್ಯಾ PGPR (Plant Growth Promoting Regulators) ಸಮ್ಮೇಳನವನ್ನು ದಿನಾಂಕ: 19 ಸೆಪ್ಟೆಂಬರ್ 2023 ರಿಂದ 20 ಸೆಪ್ಟೆಂಬರ್ 2023 ರವರೆಗೆ ಬೆಂಗಳೂರಿನ ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ವಸತಿ ಗೃಹ ಮತ್ತು ಸಮುದಾಯ ಭವನದಲ್ಲಿ ಆಯೋಜಿಸಿಲಾಗಿದೆ. ಇದರ ಉದ್ಘಾಟನೆಯು ದಿನಾಂಕ 19 ಸೆಪ್ಟೆಂಬರ್ 2023 ರಂದು ಜರುಗಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿ. ಸುರೇಶ್ ಸಮ್ಮೇಳನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮ್ಮೇಳನದ ಪ್ರಾಮುಖ್ಯತೆ ಹಾಗೂ ಪ್ರಸ್ತುತ ರೈತರಿಗೆ ಕೃಷಿಯಲ್ಲಿ ಸುಸ್ಥಿರತೆ ಕಾಣಲು ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಅವಶ್ಯಕತೆ ಬಗ್ಗೆ ವಿವರಿಸಿದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಮತ್ತು ಸಹಸಂಶೋಧನಾ ಮತ್ತು ವಿಸ್ತರಣಾ ನಿರ್ದೆಶಕರು, ತೋ.ವಿ.ವಿ. ಬಾಗಲಕೊಟೆ, ಡಾ. ವಿ. ದೇವಪ್ಪ, ಪ್ರಾಸ್ತಾವಿಕವಾಗಿ ಮಾತಾನಾಡಿ ಸಮ್ಮೇಳನದ ಉದ್ದೇಶ ತಿಳಿಸಿದರು. ಪ್ರೋ. ಎಮ್. ಎಸ್. ರೆಡ್ಡಿ ಸಂಸ್ಥಾಪಕರು ಮತ್ತು ಅಧ್ಯಕ್ಷರು ಏಷಿಯನ್ PGPR (Plant Growth Promoting Regulators) ಸಂಘಟನೆ, ಅಮೆರಿಕಾ ಇವರು ಸಂಘಟನೆಯ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿವಿ ಕುಲಪತಿ ಡಾ. ಎನ್. ಕೆ. ಹೆಗಡೆಯವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೆ ಅತಿಥಿಗಳಾಗಿ, ಡಾ. ಎಂ. ಹನುಮಂತಪ್ಪ, ಕುಲಪತಿ, ಕೃ. ವಿ. ವಿ., ರಾಯಚೂರು, ಡಾ. ಆರ್. ಸಿ. ಜಗದೀಶ ಕುಲಪತಿ, ಕೆಳದಿ ಶಿವಪ್ಪನಾಯಕ ಕೃ, ವಿ, ವಿ., ಶಿವಮೊಗ್ಗ, ಡಾ. ಎನ್. ಕೆ. ಕೃಷ್ಣಕುಮಾರ್ ನಿಕಟವರ್ತಿ ತೋಟಗಾರಿಕೆ ಡಿ.ಡಿ.ಜಿ., ಐಸಿಏಆರ್, ನವದೆಹಲಿ ಮತ್ತು ಡಾ. ಎಂ. ಕೆ. ಹೊನ್ನಭೈರಯ್ಯ, ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ಬೆಂಗಳೂರು, ಡಾ. ಮಹೇಶ್ವರಪ್ಪ್ ಸಂಶೋಧನಾ ನಿರ್ದೆಶಕರು, ತೋ.ವಿ.ವಿ. ಬಾಗಲಕೊಟೆ ಭಾಗವಹಿಸಿದ್ದರು.

PGPR (Plant Growth Promoting Regulators) ಮತ್ತು ಬೆಳೆಗಳ ನಡುವಣ ಸಂವಹನಗಳ ಕುರಿತಾದ ಸಂಶೋಧನೆಗಳು ಅತ್ಯಮೂಲ್ಯ. ಸುಸ್ಥಿರ ಮತ್ತು ಸಾವಯವ ಕೃಷಿಯ ಭವಿಷ್ಯಕ್ಕಾಗಿ ಮುಖ್ಯ ಭೂಮಿಕೆ ನಿರ್ವಹಿಸುವ ಅಂಶವಾಗಿ ಪರಿಗಣಿಸಲ್ಪಟ್ಟಿದೆ. ನವೀನ ಆವಿಷ್ಕಾರಗಳು, ಅತ್ಯುನ್ನತ ತಂತ್ರಜ್ಞಾನಗಳು ಮತ್ತು ಜಗತ್ತಿನ ಸುಸ್ಥಿರ ಕೃಷಿಯ ಭವಿಷ್ಯ ರೂಪಿಸುವ ಅನಿರ್ವಾಯವಾಗಿದೆ.

ಈ ನಿಟ್ಟಿನಲ್ಲಿ ಪಾರೀಸರಿಕ ನೀತಿಗಳನ್ನು ಎಲ್ಲ PGPR (Plant Growth Promoting Regulators) ಉದ್ಯಮಶೀಲರು ಒಂದೆಡೆ ಕಲೆತು, ಕಲಿತು ಹಂಚಿಕೊಳ್ಳಲು ಅನುಕೂಲವಾಗುವ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಏಷಿಯಾದ PGPR ಸಂಘಟನೆಯು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುತ್ತ ಬಂದಿದೆ.

ಸುಸ್ಥಿರ ಮತ್ತು ಸಾವಯವ ಕೃಷಿಯಡೆಗಿನ ತನ್ನ ದೂರದರ್ಶಿತ್ವವನ್ನು ಪ್ರಸ್ತುತಪಡಿಸಲು ಏಷ್ಯಾ ಖಂಡದ ವಿವಿಧ ದೇಶಗಳಲ್ಲಿ ಸಂಘವು ತನ್ನ ಶಾಖೆಗಳನ್ನು ಸ್ಥಾಪಿಸುವುದರ ಜೊತೆಗೆ ರಾಷ್ಟ್ರೀಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ಅರ್ಥಪೂರ್ಣ ಕಾರ್ಯಕ್ರಮವು ಒಕ್ಕೂಟದಲ್ಲಿ ಹೊಸದಾಗಿ ಹೊರಹೊಮ್ಮಿರುವ ತಂತ್ರಜ್ಞಾನಗಳನ್ನು ಗುರುತಿಸುವುದರ ಜೊತೆಗೆ ಜೈವಿಕ ಗೊಬ್ಬರ, ಜೈವಿಕ ಶಿಲೀಂಧ್ರನಾಶಕ, ಜೈವಿಕ ಪ್ರಚೋದಕಗಳು, ಜೈವಿಕ ಕಳೆನಾಶಕ, ಜೈವಿಕ ಸಸ್ಯ ಜಂತುನಾಶಕ ಇತ್ಯಾದಿಗಳ ಬೆಳೆಯುತ್ತಿರುವ ಪ್ರಾದಾನ್ಯತೆಗೆ ಒತ್ತು ನೀಡುತ್ತದೆ.

ಈ ಸಮ್ಮೇಳನದಲ್ಲಿ ದೇಶದ ರೈತ ಸಮುದಾಯದ ಉಪಯೋಗಕ್ಕೆ PGPR ಸಂಬಂಧಿತ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡುವಲ್ಲಿನ ಬಲ-ದೌರ್ಬಲ್ಯಗಳ ಕುರಿತು ಚಿಂತನೆ ನಡೆಸಿ, ಅದನ್ನು ಅರ್ಥೈಸಿಕೊಂಡು ಮುಂದೆ ಸಾಗಲು ಅವಶ್ಯವಿರುವ ತಾಂತ್ರಿಕ ಕುಶಲಮತಿಗಳ ಸತ್ವಶಾಲಿ ತಂಡವೊಂದನ್ನು ಕಟ್ಟುವ ಉದ್ದೇಶವಿದೆ.

ಈ ನಿಟ್ಟಿನಲ್ಲಿ ದೇಶದಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು, ನವೋದ್ಯಮಿಗಳು, ಯೋಜನಾಧಿಕಾರಿಗಳು, ಪ್ರಗತಿಪರ ರೈತರು ಮತ್ತು ಸರಕಾರಿ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಾಗಿದೆ. “ಭವಿ಼ಷ್ಯದ ಪೀಳಿಗೆಯಲ್ಲಿ ಆಹಾರ ಉತ್ಪಾದನೆಗಾಗಿ ಹಸಿರು ಕ್ರಾಂತಿಯನ್ನು ಬೆಂಬಲಿಸಲು PGPR ಯೋಜನೆಗಳು” ಎಂಬ ವಿಷಯದ ಮೇಲೆ ನಡೆಯಲಿರುವ ಚಿಂತನ ಮಂಥನ ಜಾಗತಿಕ ಆಹಾರ ಭದ್ರತೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮ್ಮೇಳನದ ಫಲಿತಾಂಶಗಳು ಭದ್ರ ಬುನಾದಿಗಳಾಗಲಿವೆ.

LEAVE A REPLY

Please enter your comment!
Please enter your name here