
ಶಿವಮೊಗ್ಗದ ಎಪಿಎಂಸಿಯಲ್ಲಿ ಮಂಗಳವಾರ ಸರಕು (ಹಸ) ಅಡಿಕೆ ಗರಿಷ್ಠ ದರ ಕ್ವಿಂಟಲ್‌ಗೆ ₹98,896 ತಲುಪಿ ದಾಖಲೆ ಬರೆದಿತ್ತು. ಇನ್ನೇನು ಒಂದು ಲಕ್ಷದ ಗಡಿ ದಾಟಬಹುದು ಎನ್ನುವಾಗಲೇ ಬುಧವಾರ ಜರ್ರನೆ ಇಳಿದು ₹86,600 ಗೆ ಬಂದು ನಿಂತಿದೆ. ಕಳೆದ ವಾರವೂ ಹೀಗೆ ಆಗಿತ್ತು. ದರ ಏರುತ್ತಾ ಬಂದು ಮೇ 6 ರಂದು ಗರಿಷ್ಠ ದರ ₹98,610 ತಲುಪಿತ್ತು. ಇನ್ನೇನು ಲಕ್ಷವನ್ನು ದಾಟಲಿದೆ ಎನ್ನುವಾಗ ಭಾರತ-ಪಾಕ್ ಸಂಘರ್ಷದಿಂದಾಗಿ ಧಾರಣೆ ಕುಸಿದಿತ್ತು. ಒಂದೇ ದಿನ ಸುಮಾರು ಹತ್ತು ಸಾವಿರದಷ್ಟು ಕಡಿಮೆಯಾಗಿತ್ತು
ಕದನ ವಿರಾಮದಿಂದಾಗಿ ಮತ್ತೆ ಈ ವಾರ ಅಡಿಕೆಯ ಧಾರಣೆ ಏರಿಕೆಯ ಹಾದಿ ಹಿಡಿದಿದೆ ಎಂದು ನಾವೆಲ್ಲಾ ಖುಷಿಯಲ್ಲಿರುವಾಗಲೇ ಮತ್ತೆ ಕುಸಿದಿದೆ. ಈ ನಡುವೆ ಅಡಿಕೆ ಹಾಳೆಯ ಉತ್ಪನ್ನಗಳಿಗೆ ಅಮೆರಿಕ ನಿಷೇಧ ಹೇರಿರುವ ಕುರಿತು ಗೆಳೆಯ ಅರುಣ್ ಪ್ರಸಾದ್ ಅವರು ನಮ್ಮೆಲ್ಲರ ಗಮನ ಸೆಳೆದು, ಖುಷಿಯ ಬಲೂನನ್ನು ಠುಸ್ ಎನಿಸಿದ್ದಾರೆ.
ಹೌದು, ಅಮೆರಿಕದ ʻಆಹಾರ ಮತ್ತು ಔಷಧ ಆಡಳಿತ ʼ (Food and Drug Administration -FDA) ಅಡಿಕೆ ಹಾಳೆಯ ಬಳಕೆಯನ್ನು ನಿರ್ಬಂಧಿಸಿದೆ. ಈ ಸಂಬಂಧ ಮೇ 8 ರಂದು, ಅಮೆರಿಕದ ಆಮದುದಾರರಿಗೆ, ವಿತರಕರಿಗೆ ಪತ್ರವೊಂದನ್ನು ಬರೆದು, ಅಡಿಕೆ ಹಾಳೆಯ ಎಲ್ಲ ಉತ್ಪನ್ನಗಳು ಬಳಕೆಗೆ ಸುರಕ್ಷಿತವಲ್ಲದ ಕಾರಣಕ್ಕಾಗಿ, ʻʻmay not lawfully be offered for sale in the U.Sʼʼ ಎಂದು ಹೇಳಿದೆ.
ಅಡಿಕೆ ಹಾಳೆಯ ಉತ್ಪನ್ನಗಳಲ್ಲಿ ನೈಸರ್ಗಿಕವಾಗಿರುವ ವಿಷಕಾರಿ ಅಂಶಗಳು ಕಂಡು ಬಂದಿವೆ ಎಂದು ಸಂಶೋಧನೆ ಹೇಳಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿರುವುದಾಗಿ ಅಮೆರಿಕದ ಎಫ್‌ಡಿಎ ತಿಳಿಸಿದೆ. ಅಡಿಕೆ ಹಾಳೆಯಲ್ಲಿಯೂ ʻಆಲ್ಕಲಾಯಿಡ್ಸ್ʼ (alkaloids) ಇದ್ದು, ಇದು ಆಹಾರದ ಮೂಲಕ ದೇಹವನ್ನು ಸೇರಿ, ಕ್ಯಾನ್ಸರ್ ಕಾರಕವಾಗಲೂ ಬಹುದು ಎಂದು ಎಫ್‌ಡಿಎ ವಿವರಿಸಿದೆ.
ಈ ಪತ್ರದಲ್ಲಿ ಏನು ಹೇಳಲಾಗಿದೆ ಎಂದರೆ; FDA researchExternal Link Disclaimer shows that naturally occurring toxins in these products migrate to food at levels that may pose a health risk to consumers. Therefore, the use of the sheath of A. catechu palm leaves in food contact articles such as dinnerware does not meet the statutory criteria for general recognition of safety (GRAS) and no authorizations exist for its use in food.
ಈ ಸಂಶೋಧನೆಯ ವರದಿಯನ್ನು ʻʻInvestigation into the presence of alkaloids in Areca catechu-based single-use food-contact articles (FCA)ʼʼ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಅಡಿಕೆಯೇ ಕ್ಯಾನ್ಸರ್ ಕಾರಕ ಎಂದು ಅಂತಾರಾಷ್ಟ್ರೀಯ ಸಂಶೋಧನೆಗಳು ಪದೇ ಪದೇ ಸಾರುತ್ತಲೇ ಬಂದಿವೆ. ವಿಶ್ಚ ಆರೋಗ್ಯ ಸಂಸ್ಥೆಯ (ಡಬ್ಲುಎಚ್ಒ) ಅಂಗ ಸಂಸ್ಥೆಯಾದ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್ (ಐಎಆರ್ ಸಿ) 2003ರ ಲ್ಲಿಯೇ ಅಡಿಕೆಗೆ ಮರಣ ಶಾಸನ ಬರೆದಾಗಿದೆ. ಈಗ ಅಡಿಕೆ ಹಾಳೆಯ ಮೇಲೂ ಕಣ್ಣು ಹಾಕಿವೆ.
ಬುಧವಾರ ಅಡಿಕೆ ಧಾರಣೆ ಕುಸಿಯಲು ಈ ಸುದ್ದಿಯೇನು ಕಾರಣವಲ್ಲ. ಏಕೆಂದರೆ ಇದು ಅಡಿಕೆ ಹಾಳೆಗೆ ಸಂಬಂಧಿಸಿದ ವಿಷಯ, ಅಡಿಕೆಗಲ್ಲ. ಒಟ್ಟಾರೆ ಅಡಿಕೆ ಬೆಳೆಗಾರರಿಗೆ ಒಂದಲ್ಲಾ ಒಂದು ಚಿಂತೆ ತಪ್ಪಿದ್ದಲ್ಲ.