Home Blog
ಕೋಲಾರದ ರೈತರು ತೋತಾಪುರಿ ಮಾವಿನ ಹಣ್ಣನ್ನು ಬೆಲೆ ಕುಸಿತದ ಕಾರಣಕ್ಕೆ, ಪ್ರತಿಭಟಿಸಿ ರಸ್ತೆಗೆ ಚೆಲ್ಲಿದ್ದಾರೆ. ಚಿತ್ತೂರು ಜಿಲ್ಲಾಧಿಕಾರಿಯು ಕರ್ನಾಟಕದ ತೋತಾಪುರಿ ಅಲ್ಲಿಗೆ ಬಾರದಂತೆ ನಿರ್ಬಂಧಿಸಿದ ಕಾರಣ ಈ‌ ಕುಸಿತ ಆಗಿದೆ. ಈ ನಿರ್ಬಂಧ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ನಮ್ಮ ಮುಖ್ಯಮಂತ್ರಿ ತಗಾದೆ ತೆಗೆದು ಪತ್ರ ಬರೆದಿದ್ದಾರೆ. ಸರಕಾರದ ಜಾಣತನ, ನಿರ್ಲಕ್ಷ್ಯ ಇಲ್ಲೇ ಇರುವುದು ಯಾರಿಗೂ ಕಂಡಿಲ್ಲ. ೧. ಚಿತ್ತೂರು, ತೋತಾಪುರಿಯ ಮಾರಾಟದ ಕೇಂದ್ರ. ಈ ತೋತಾಪುರಿ ಹಣ್ಣನ್ನು ಮನುಷ್ಯರು ತಿಂದಿದ್ದು ನಾನು ನೋಡಿಲ್ಲ ! ಮಾವಿನ ಹಣ್ಣಿನ‌ ಪಲ್ಪಿನ‌ ಬಳಕೆ ಮಾಡುವ ಕಂಪೆನಿಗಳಷ್ಟೇ ಇದರ...
ಕೇರಳದಲ್ಲಿ ಇಂದು, ನೈಋತ್ಯ ಮುಂಗಾರು. ಮೇ 24, 2025 ರಂದು ಪ್ರವೇಶಿಸಿದೆ. ಇದು ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ವಾಡಿಕೆಗಿಂತ ಭಿನ್ನವಾಗಿದೆ. ಹೀಗಾಗಿ, ನೈಋತ್ಯ ಮಾನ್ಸೂನ್ ಕೇರಳದಲ್ಲಿ ಸಾಮಾನ್ಯ ದಿನಾಂಕಕ್ಕಿಂತ 8 ದಿನಗಳ ಮೊದಲು ಪ್ರವೇಶಿಸಿದೆ. 2009 ರ ನಂತರ ಕೇರಳದಲ್ಲಿ ಮುಂಗಾರು ಮಳೆಯ ಮೋಹಕ ನರ್ತನ ಬೇಗನೇ ಆರಂಭವಾಗಿದೆ. 2009ನೇ ಇಸ್ವಿಯಲ್ಲಿ ಮೇ 23 ರಂದು ಕೇರಳವನ್ನು ಪ್ರವೇಶಿಸಿತ್ತು. ಬಂಗಾಳಕೊಲ್ಲಿಯಲ್ಲಿ ಬಲಗೊಂಡ ಪಶ್ಚಿಮ ಗಾಳಿ ಮತ್ತು ಕಡಿಮೆ ಒತ್ತಡದ ವ್ಯವಸ್ಥೆಗಳಿಂದಾಗಿ ಸಾಮಾನ್ಯವಾಗಿ  ಜೂನ್ 1 ರಂದು...
ತೆಂಗು,ಅಡಿಕೆ,ಇನ್ನಿತರೇ ತೋಟಗಾರಿಕೆ ಬೆಳೆಗಳ ಸಾಲಿನ ನಡುವೆ ಕಂದಕ(ಟ್ರೆಂಚ್) ನಿರ್ಮಾಣ ಮಾಡುವುದರಿಂದ ಸಾಕಷ್ಟು ಅನುಕೂಲವಾಗಲಿದೆ.  ಟ್ರೆಂಚ್ ಅಳತೆ:03 ಅಡಿ ಅಗಲ, 02 ಅಡಿ ಅಳ ಹಾಗು ಉದ್ದ 15-20 ಅಡಿ,ನಂತರ 03 ಅಡಿ ಗ್ಯಾಪ್ ಇರಲಿ. ಟ್ರೆಂಚ್ ನಿರ್ಮಾಣ ಮಾಡಲು ಜೆಸಿಬಿ ಗಿಂತ ಹಿಟಾಚಿ ಮೂಲಕ ಮಾಡುವುದರಿಂದ ಕೆಲಸ ವೇಗವಾಗಿ, ಚೆನ್ನಾಗಿ ಆಗುತ್ತದೆ, ಹಣ ಉಳಿತಾಯವಾಗುತ್ತದೆ. ಇಳಿಜಾರಿಗೆ ಆಡಲಾಗಿ ಟ್ರೆಂಚ್ ಮಾಡಬೇಕು. ಉದಾಹರಣೆಗೆ ನಿಮ್ಮ ಜಮೀನು ದಕ್ಷಿಣದಿಂದ ಉತ್ತರದ ಕಡೆ ಇಳಿಜಾರಿದರೆ(Slope) ಪೂರ್ವ -ಪಶ್ಚಿಮಕ್ಕೆ ಟ್ರೆಂಚ್ ಇರಬೇಕು,ಟ್ರೆಂಚ್ ತೆಗೆದ ಮಣ್ಣು ಟ್ರೆಂಚ್ ನಿಂದ ಒಂದು ಅಡಿ...
ಶಿವಮೊಗ್ಗದ ಎಪಿಎಂಸಿಯಲ್ಲಿ ಮಂಗಳವಾರ ಸರಕು (ಹಸ) ಅಡಿಕೆ  ಗರಿಷ್ಠ ದರ  ಕ್ವಿಂಟಲ್‌ಗೆ ₹98,896 ತಲುಪಿ ದಾಖಲೆ ಬರೆದಿತ್ತು. ಇನ್ನೇನು ಒಂದು ಲಕ್ಷದ ಗಡಿ ದಾಟಬಹುದು ಎನ್ನುವಾಗಲೇ ಬುಧವಾರ ಜರ್ರನೆ ಇಳಿದು ₹86,600 ಗೆ ಬಂದು ನಿಂತಿದೆ. ಕಳೆದ ವಾರವೂ ಹೀಗೆ ಆಗಿತ್ತು. ದರ ಏರುತ್ತಾ ಬಂದು ಮೇ 6 ರಂದು ಗರಿಷ್ಠ ದರ ₹98,610 ತಲುಪಿತ್ತು. ಇನ್ನೇನು ಲಕ್ಷವನ್ನು ದಾಟಲಿದೆ ಎನ್ನುವಾಗ ಭಾರತ-ಪಾಕ್‌ ಸಂಘರ್ಷದಿಂದಾಗಿ ಧಾರಣೆ ಕುಸಿದಿತ್ತು. ಒಂದೇ ದಿನ ಸುಮಾರು ಹತ್ತು ಸಾವಿರದಷ್ಟು ಕಡಿಮೆಯಾಗಿತ್ತು ಕದನ ವಿರಾಮದಿಂದಾಗಿ ಮತ್ತೆ ಈ ವಾರ ಅಡಿಕೆಯ...
ಹದಿನೆಂಟನೇ ಶತಮಾನದ 1767 ರಲ್ಲಿ ಅಮೇರಿಕಾದಲ್ಲಿ ಪರಿಶುದ್ದವಾದ  ಔಷಧೀಯ ಗುಣಗಳಿರುವ  ಸ್ಪ್ರಿಂಗ್  ವಾಟರ್  ಎಂದು ನೀರನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುವುದು ಪ್ರಾರಂಭವಾಯ್ತು. ನಂತರ ಶುಧ್ಧೀಕರಿಸಿದ ನೀರು ಎಂದು ಬದಲಾಯ್ತು. ಈಗ ಖನಿಜಾಂಶಯುಕ್ತ ನೀರು ಎಂದು ಮಾರಾಟ  ಆಗ್ತಾ ಇದೆ. ಭಾರತದಲ್ಲಿ  1965 ರಲ್ಲಿ ಬಾಟಲಿಗಳಲ್ಲಿ ನೀರು ಮಾರಾಟ ಪ್ರಾರಂಭವಾಯ್ತು. ಇತ್ತೀಚಿನ  ಅಂದಾಜಿನಂತೆ  ಜಗತ್ತಿನಾದ್ಯಂತ  ವಾರ್ಷಿಕ  490 ಬಿಲಿಯನ್  ಲೀಟರ್‌‌  ನೀರು ಮಾರಾಟವಾಗುತ್ತದೆ. ಅದರಲ್ಲಿ ಕೆಲ ಬಾಗ ಮತ್ತೆ ಮತ್ತೆ ಉಪಯೋಗಿಸುವ 10, 20 ಲೀಟರ್ ಕ್ಯಾನ್ ಗಳಲ್ಲಿ ಮಾರಾಟವಾಗುತ್ತದೆ. ನಿಖರ ಅಂಕಿ ಅಂಶಗಳು...
ಭಾರತದ ಜೀವದಾಯಿನಿಯಾದ ನೈರುತ್ಯ ಮುಂಗಾರು ಅಂಡಮಾನ್ ಸಮುದ್ರ, ದಕ್ಷಿಣ ಬಂಗಾಳಕೊಲ್ಲಿಯ ಕೆಲವು ಭಾಗಗಳು, ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶವನ್ನು ಶೀಘ್ರದಲ್ಲೇ ತಲುಪುವ ನಿರೀಕ್ಷೆಯಿದೆ. ಮತ್ತಷ್ಟು ಪ್ರಗತಿಗೆ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಬಂಗಾಳಕೊಲ್ಲಿಯಲ್ಲಿ ಬಲಗೊಂಡ ಪಶ್ಚಿಮ ಗಾಳಿ ಮತ್ತು ಕಡಿಮೆ ಒತ್ತಡದ ವ್ಯವಸ್ಥೆಗಳಿಂದಾಗಿ ಸಾಮಾನ್ಯವಾಗಿ  ಜೂನ್ 1 ರಂದು ಆರಂಭವಾಗುವ ಮುಂಗಾರು ಮಳೆಯು ಮುಂಚಿತವಾಗಿ ಮೇ 27, 2025 ರಂದು ಕೇರಳಕ್ಕೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಶಾನ್ಯ ಭಾರತ ಮತ್ತು ಕೇರಳದ ಕೆಲವು ಭಾಗಗಳನ್ನು...
ದಿನಾಂಕ: ಶುಕ್ರವಾರ, 25 ಏಪ್ರಿಲ್ 2025, ಬಿಡುಗಡೆ ಸಮಯ: 12:50 ಗಂಟೆಗಳು IST, ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: I) 0830 ಗಂಟೆಗಳು IST ಯಲ್ಲಿ ದಾಖಲಾದ ಅವಲೋಕನಗಳ ಸಾರಾಂಶ: ಮರಾಠವಾಡದ ಉತ್ತರ ಭಾಗದಿಂದ ಮನ್ನಾರ್ ಕೊಲ್ಲಿಯವರೆಗೆ ಕರ್ನಾಟಕದ ಒಳಭಾಗ ಮತ್ತು ತಮಿಳುನಾಡಿನಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಉತ್ತರ-ದಕ್ಷಿಣ ತಗ್ಗು ಮುಂದುವರಿದಿದೆ. ಮುಂದಿನ ಏಳು ದಿನಗಳವರೆಗೆ ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆ:  ದಿನ 1 (25 ಏಪ್ರಿಲ್ 2025): ಕರಾವಳಿ ಕರ್ನಾಟಕ: ದಕ್ಷಿಣ ಕನ್ನಡ ಜಿಲ್ಲೆಯ ಒಂದು ಅಥವಾ...
DATE: FRIDAY, THE 25th April 2025, Time of issue: 12:50 Hrs IST, DAILY WEATHER REPORT FOR KARNATAKA STATE: I) SUMMARY OF OBSERVATIONS RECORDED AT 0830 HRS IST: The north-south trough from northern part of Marathwada to Gulf of Mannar across Interior Karnataka and Tamil Nadu at 0.9 km above mean sea level persists. FORECAST & WARNING FOR KARNATAKA FOR NEXT...
Environmental conservation can be practiced in many ways. Separating wet and dry waste daily at home and storing them separately, handing them over to municipal waste collection vehicles instead of littering, carrying cloth bags from home for vegetable or grocery shopping, deciding not to use plastic bags, planting and nurturing saplings with like-minded people in spare time, and ensuring...
ಪರಿಸರ ಸಂರಕ್ಷಣೆ ಕೆಲಸವನ್ನು ಹಲವು ರೀತಿ ಮಾಡಬಹುದು. ಮನೆಗಳಲ್ಲಿ ದಿನನಿತ್ಯ ಹಸಿಕಸ, ಒಣಕಸ ಬೇರ್ಪಡಿಸಿ ಪ್ರತ್ಯೇಕವಾಗಿ ಸಂಗ್ರಹಿಸುವುದು, ಎಲ್ಲಿಯೋ ಬಿಸಾಡದೇ ನಗರಪಾಲಿಕೆಯ ಕಸ ಸಂಗ್ರಹಣೆ ವಾಹನ ಬಂದಾಗ ನೀಡುವುದು, ತರಕಾರಿ, ದಿನಸಿ ಖರೀದಿಗೆ ಹೋಗುವಾಗ ಮನೆಯಿಂದಲೇ ಬಟ್ಟೆ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗುವುದು, ಪ್ಲಾಸ್ಟಿಕ್ ಕವರ್ ಗಳನ್ನು ತರುವುದಿಲ್ಲವೆಂದು ನಿರ್ಧರಿಸುವುದು, ಬಿಡುವು ಮಾಡಿಕೊಂಡು ಸಮಾನಾಸಕ್ತರೊಂದಿಗೆ ಸೇರಿ ಸಸಿಗಳನ್ನು ನೆಟ್ಟು ಸಂರಕ್ಷಿಸುವುದು, ಅಕ್ರಮವಾಗಿ ಮರಗಿಡ ಕಡಿತವಾಗದಂತೆ ಗಮನಿಸುವುದು ಹೀಗೆ ಅನೇಕ ರೀತಿಯಲ್ಲಿ ಪರಿಸರ ಸೇವೆ ಮಾಡಬಹುದು. ಇವುಗಳ ಜೊತೆಗೆ ತೆಳು ಪ್ಲಾಸ್ಟಿಕ್ ಹಾಳೆಯ ಲೇಪನ ಇರುವ...

Recent Posts