ಕೃಷಿ ಮೇಳ-2022 ದೇಸಿ ವಿರ್ದ್ಯಾಥಿಗಳ ಕಲರವ

0

ಬೆಂಗಳೂರು (ಜಿಕೆವಿಕೆ –  ಕೃಷಿಮೇಳ)  ನವೆಂಬರ್ 3: ಕೃಷಿ ಮೇಳ-2022 ರಲ್ಲಿ ಸಮೇತಿ ದಕ್ಷಿಣ. ಸಿಬ್ಬಂದಿ ತರಬೇತಿ ಘಟಕದ ವತಿಯಿಂದ ದಕ್ಷಿಣ ಕರ್ನಾಟಕದ 16 ಜಿಲ್ಲೆಗಳಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಕೋರ್ಸ್(ದೇಸಿ) ಕಾರ್ಯಕ್ರಮವು ಚಾಲನೆಯಲ್ಲಿದೆ.

ಈ ಕಾರ್ಯಕ್ರಮದ 16 ತಂಡಗಳ 645 ವಿದ್ಯಾರ್ಥಿಗಳು ಕೃಷಿಮೇಳದಲ್ಲಿ ವಿವಿಧ ಬಣ್ಣದ ಸಮವಸ್ತ್ರದಲ್ಲಿ ಭಾಗವಹಿಸಿ ಕೃಷಿಮೇಳಕ್ಕೆ ಮೆರಗನ್ನು ತಂದರು. ದೇಸಿ ಕಾರ್ಯಕ್ರಮದ ಶೈಕ್ಷಣಿಕ ಪ್ರವಾಸವನ್ನು ಕೃಷಿಮೇಳದಲ್ಲಿ ಕೈಗೊಂಡು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಕಣ್ಣಾರೆ ಕಂಡು ಹೆಚ್ಚು ಕೌಶಲ್ಯಭರಿತ ತರಬೇತಿಯನ್ನು ಪಡೆದರು.

ತಮ್ಮ ಕೃಷಿ ಪರಿಕರ ಮಳಿಗೆಗಳಿಗೆ ಭೇಟಿ ನೀಡುವ ರೈತರಿಗೆ ವೈಜ್ಞಾನಿಕ ಮಾಹಿತಿಯನ್ನು ತಲುಪಿಸಲು ಕೃಷಿಮೇಳ ಸಹಕಾರಿಯಾಗಿದೆ  ಎಂದು ಅಭಿಪ್ರಾಯಪಟ್ಟರು.

ದೇಸಿ ವಿದ್ಯಾರ್ಥಿಯಾದ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿಗ್ರಾಮದ ಆನಂದ್‌ ಅವರು ಕೃಷಿಮೇಳದಲ್ಲಿ ದೇಸಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಕೃಷಿಯಲ್ಲಿ ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಮತ್ತು ಇತರೆ ದೇಸಿ ವಿದ್ಯಾರ್ಥಿಗಳ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸಿದಂತಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

LEAVE A REPLY

Please enter your comment!
Please enter your name here