Home Blog Page 128
"ಉತ್ತಮ ಇಳುವರಿ ಪಡೆಯಲು ಕೃಷಿಕರು ಶ್ರಮ ಪಡುತ್ತಾರೆ. ಇಂಥ ಸಂದರ್ಭದಲ್ಲಿ ಬಳಸಬೇಕಾದ ಪೋಷಕಾಂಶ, ಬೆಳೆವರ್ಧಕಗಳ ಮಾಹಿತಿ ಅಗತ್ಯವಾಗಿರುತ್ತದೆ. ಸಸ್ಯರೋಗಗಳು, ಕೀಟಬಾಧೆ ಕಂಡು ಬಂದ ಸಂದರ್ಭದಲ್ಲಿಯೂ ಶೀಘ್ರ ಪರಿಹಾರಕ್ಕಾಗಿ ಅವರಿಗೆ ವೈಜ್ಞಾನಿಕ ನೆಲೆಗಟ್ಟಿನ ಸಲಹೆ ಸೂಚನೆಗಳು ಬೇಕಿರುತ್ತವೆ. ಈ ನಿಟ್ಟಿನಲ್ಲಿ ತತಕ್ಷಣ ಅವರಿಗೆ ಪರಿಹಾರ ಸೂಚಿಸುವ ಸಲುವಾಗಿ 'ಕ್ರಿಯಾಜೆನ್ ಅಗ್ರಿ ಅ್ಯಪ್' ಅಭಿವೃದ್ಧಿ ಪಡಿಸಲಾಗಿದೆ" ಎಂದು ಕೃಷಿ ವಿಜ್ಞಾನಿ ಮತ್ತು ಕ್ರಿಯಾಜೆನ್ ಸಂಸ್ಥೆ ಮುಖ್ಯಸ್ಥರೂ ಆದ ಡಾ.ಬಸವರಾಜ ಗಿರೆಣ್ಣವರ್ ವಿವರಿಸಿದರು. ಕರ್ನಾಟಕದ ಕೃಷಿರಂಗಕ್ಕೆ 'ಕೃಷಿ ಅ್ಯಪ್' ಹೊಸ ಪರಿಕಲ್ಪನೆ. ಇದನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕ್ರಿಯಾಜೆನ್...
ಕೃಷಿಯ ಜೊತೆಜೊತೆಗೆ ಪೂರಕ ಉಪಕುಸುಬುಗಳು ಇರಬೇಕು. ಆಗಷ್ಟೆ ಸುಸ್ಥಿರ ಮಾದರಿ ಕೃಷಿಬದುಕು ನಡೆಸಲು ಸಾಧ್ಯವಾಗುತ್ತದೆ. ಕೃಷಿಯೊಂದನ್ನೇ ನೆಚ್ಚಿಕೊಂಡು ಬದುಕುವುದು ಕಷ್ಟಕರ. ಅದರಲ್ಲಿಯೂ ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿಯೊಂದನ್ನೇ ನಂಬಿ ಬದುಕುವುದು ಸವಾಲಿನ ಸಂಗತಿ. ಆದ್ದರಿಂದ ಕೊಂಚ ಪರಿಣತಿ ಇರುವ, ಆಸಕ್ತಿ ಇರುವ ಉಪಕುಸುಬುಗಳನ್ನು ಸಹ ಮಾಡುವುದು ಅತ್ಯಗತ್ಯ. ಕ್ರಮೇಣ ಇಂಥ ಉಪ ಕಸುಬು ಪ್ರಧಾನ ವೃತ್ತಿಯೇ ಆಗಿ ಪರಿಣಮಿಸಬಹುದು. ಕರ್ನಾಟಕ ರಾಜ್ಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೃಷಿಕರ ಸಂಖ್ಯೆಯೇ ಹೆಚ್ಚು. ಚಿಕ್ಕಚಿಕ್ಕ ಹಿಡುವಳಿಗಳ ಕಾರಣ ಇವರು ಕೃಷಿಯನ್ನೇ ನೆಚ್ಚಿಕೊಂಡಿರುವುದು ಲಾಭಕಾರಿಯಲ್ಲ....
 ಈ ಬಾರಿ ಬೆಂಗಳೂರು ಕೃಷಿವಿದ್ಯಾಲಯ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿದ್ದು ಗಮನಾರ್ಹ. ಮಳಿಗೆಗಳ ವ್ಯವಸ್ಥಾಪನೆ, ಕೃಷಿಕರ ಗಮನ ಸೆಳೆಯುವಿಕೆ ಹಿಂದಿನ ವರ್ಷಗಳಿಗಿತಲೂ ಅಚ್ಚುಕಟ್ಟು. ನಾಲ್ಕು ದಿನದ ಅವಧಿಯಲ್ಲಿ ಒಟ್ಟು ನಾಲ್ಕು ಲಕ್ಷ ಜನ ಭಾಗವಹಿದ್ದಾರೆಂಬ ಅಂದಾಜು. ಪ್ರಾತ್ಯಕ್ಷಿಕೆ ತಾಕುಗಳಸನಿಹದಲ್ಲಿಯೇ ಮಳಿಗೆಗಳಿದ್ದವು.ಇದರಿಂದ ರೈತರು ಆಸಕ್ತರು ಹೆಚ್ಚು ದೂರ  ನಡೆಯುವ ಪ್ರಮೇಯವಿರಲಿಲ್ಲ. ಮಳಿಗೆಗಳ ಮಧ್ಯದಲ್ಲಿಯೇ ಸಭಾಂಗಣವಿದ್ದರಿಂದ  ಪ್ರೇಕ್ಷಕರಕೊರತೆಯಿರಲಿಲ್ಲ. ಸಾವಯವ ಕೃಷಿ ಬಗ್ಗೆ ಆದ್ಯತೆ ನೀಡಲಾಗಿತ್ತು. ಸಾವಯವ  ಕೃಷಿಯಲ್ಲಿ  ಸಾಧನೆಮಾಡಿದ  ರೈತರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರಿಂದ ಹೆಚ್ಚು ಪ್ರಯೋಜನವಾಯಿತು.  ಇಂಥಉಪನ್ಯಾಗಳ  ಸಂದರ್ಭದಲ್ಲಿ ರೈತರು  ತಮ್ಮ  ಸಂದೇಹಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿಚರ್ಚೆ-ಸಂವಾದದಲ್ಲಿ  ತೊಡಗಿಸಿಕೊಂಡಿದ್ದು ಅವರ  ಆಸಕ್ತಿಯನ್ನು ವ್ಯಕ್ತಪಡಿಸುತ್ತಿತ್ತು. ಹೊಸತಳಿ: ಕೃಷಿಮೇಳದ ಸಂದರ್ಭದಲ್ಲಿ ಹೊಸತಳಿಗಳನ್ನು ಬಿಡುಗಡೆ ಮಾಡಲಾಯಿತು. ಕಡಿಮೆ ಅವಧಿಯಭತ್ತದ ತಳಿಕೆಎಂಪಿ-105, ಅಧಿಕ ಇಳುವರಿಯೊಂದಿಗೆ ಜಾನುವಾರುಗಳಿಗೂ ಅಧಿಕ ಮೇವು ಒದಗಿಸುವ ಮುಸುಕಿನ ಜೋಳದ ಸಂಕರಣ ತಳಿ - ಎನ್.ಎ.ಹೆಚ್ 1137(ಹೇಮ), ಹೆಚ್ಚು ಇಳುವರಿ ನೀಡುವ ಶೇಂಗಾ ತಳಿಕೆ.ಸಿ.ಜಿ, ಸೋಯಾ ಅವರೆ ತಳಿ ಎಂ.ಎ.ಯು.ಎಸ್(ಪೂಜಾ), ಅಲಸಂದೆ ತಳಿ ಪಿ.ಕೆ.ಬಿ-4 ಲೋಕಾರ್ಪಣೆಯಾದವು. ಇದೇ ಸಂದರ್ಭದಲ್ಲಿ ಸಮೃದ್ದ ಇಳುವರಿ ನೀಡುವ ಸೂರ್ಯಕಾಂತಿ ತಳಿಗಳಪ್ರದರ್ಶನವಿತ್ತು. ಸಾವಯವ ಕೃಷಿ: ಮೇಳದಲ್ಲಿ ಸಾವಯವ ಕೃಷಿ ವಿಭಾಗ ಭಾಗವಹಿಸಿದವರ ಗಮನ ಸೆಳೆಯಿತು. ರಾಜ್ಯದ ವಿವಿಧ ಭಾಗಗಳಲ್ಲಿಸಾವಯವ ಗ್ರಾಮ ಯೋಜನೆಯಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಸಾಧನೆ ತೋರಿಸುವಅಂಶಗಳನ್ನು ಮಳಿಗೆಗಳಲ್ಲಿಟ್ಟಿದ್ದರು. ಕೃಷಿಕರ ಸಾಧನೆ ವಿವರಿಸುವ ಪುಸ್ತಕಗಳು, ನಾಟಿ ತಳಿಯ ಬಿತ್ತನೆಬೀಜಗಳು, ರೈತ ಮಹಿಳೆಯರೇ ತಯಾರಿಸಿದ ಮೌಲ್ಯಧಾರಿತ ಕೃಷಿ ಉತ್ಪನ್ನಗಳು ಅಲ್ಲಿದ್ದವು. ಜಾನುವಾರು ಪ್ರದರ್ಶನ: ಇದಕ್ಕಾಗಿಯೂ ಪ್ರತ್ಯೇಕ ವಿಭಾಗವಿತ್ತು. ವಿದೇಶಿ ತಳಿ ಕುರಿಗಳು, ಎಮು ಪಕ್ಷಿಗಳು, ಮಿಶ್ರ ತಳಿಯ ಕೋಳಿಗಳು,ಜವಾರಿ ಎತ್ತುಗಳು ಗಮನ ಸೆಳೆದವು. ನಾಟಿ ಎತ್ತು-ಹಸುಗಳನ್ನು  ಬಹಳ  ಚೆನ್ನಾಗಿ  ಸಾಕಿದ  ಕೃಷಿಕರು  ಅವುಗಳನ್ನು ಸಾಕಿದ  ಮತ್ತು ...

Recent Posts