Home Blog Page 95
ಭತ್ತದ ಕೃಷಿ ಮಾಡುವುದೆಂದರೆ ಲಾಭದಾಯಕವಲ್ಲದ್ದು ಎಂಬ ಭಾವನೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮಾರುಕಟ್ಟೆಯಿಂದ ಪೋಷಕಾಂಶಗಳನ್ನು ತಂದು ಹಾಕುವುದು. ಹೀಗೆ ಮಾಡಿದಾಗ ಸಹಜವಾಗಿಯೇ ಲಾಭಾಂಶ ಕಡಿಮೆಯಾಗುತ್ತದೆ ಅಥವಾ ಮಾಡಿರುವ ಖರ್ಚು ಸಹ ದೊರಕುವುದಿಲ್ಲ. ಇದರಿಂದ ರೈತರ ಪರಿಶ್ರಮಕ್ಕೆ ಸೂಕ್ತ ಬೆಲೆ ದೊರೆತಂತೆ ಆಗುವುದಿಲ್ಲ. ಆದ್ದರಿಂದ ಭತ್ತದ ಕೃಷಿ ಮಾಡುವಾಗ ಸಾಧ್ಯವಾದಷ್ಟೂ ಸ್ಥಳೀಯ ಸಂಪನ್ಮೂಲ ಬಳಿಸಿಕೊಳ್ಳುವುದು ಉತ್ತಮ. ಈ ದಿಶೆಯಲ್ಲಿ ಮುಂದಿನ ಸಲಹೆ ನೀಡಲಾಗಿದೆ. 'ಕೃಷಿಕರು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಉತ್ತಮ. ಇದರಿಂದ ಖರ್ಚನ್ನು ಸಾಧ್ಯವಾದಷ್ಟು ತಗ್ಗಿಸಬಹುದು. ಉತ್ತಮ ಇಳುವರಿ ಪಡೆಯಲು...
ಹಾಲಿನ ಡೈರಿಗಳು ಗೊತ್ತು ; ಇದ್ಯಾವುದು ಟೊಮೆಟೊ ಡೈರಿ ಎಂದು ಆಶ್ಚರ್ಯವಾಯಿತೆ ? ಇದು ಮಹಾರಾಷ್ಟ್ರದ ಸತಾರಾದಲ್ಲಿದೆ. ಯುವಕರಿಬ್ಬರ ಆಸಕ್ತಿ, ಪರಿಶ್ರಮದಿಂದ ರೂಪಿತವಾಗಿದೆ. ತರಕಾರಿ ಕೃಷಿಕರು ಗುಣಮಟ್ಟದ ತರಕಾರಿಗಳ ಕೃಷಿ ಮಾಡಲು ಉತ್ತಮ ಲಾಭಗಳಿಸಲು ಮಾರ್ಗದರ್ಶಿಯಾಗಿದೆ. ಟೊಮೆಟೋ ಡೈರಿ ಸ್ಥಾಪನೆಗೆ ಕಾರಣವೂ ಇದೆ. ಸತಾರಾ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಟೊಮೆಟೊ ಬೆಳೆಯುತ್ತಾರೆ. ಈ ಬೆಳೆಗೆ ತಗುಲುವ ಟೊಮೆಟೊ ಮೊಸಾಯಿಕ್ ವೈರಸ್ ದಾಳಿಯ ಬಗ್ಗೆ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ೨೦೨೦ – ೨೧ರ ಸಾಲಿನಲ್ಲಿ ಕೃಷಿಕರು ಮತ್ತು ಕೃಷಿವಿಜ್ಞಾನಿಗಳೊಂದಿಗೆ ಸಭೆ ಆಯೋಜಿಸಿತ್ತು....
ಒಂದೂವರೆಯಿಂದ ಎರಡು ಸಾವಿರ ಎಕರೆ ಕಡಲ ಅಂಚಿನ ಭೂಮಿ,ಒಂದು ಅಂದಾಜಿನ ಪ್ರಕಾರ ಸುಮಾರು ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೇಸಿಗೆ ತರಕಾರಿ ಬೆಳೆದು ಮಾರುವ ಪರಂಪರೆ ಉಳಿಸಿಕೊಂಡಿವೆ.ಇವರ ಬೇಲಿ, ನೀರಾವರಿ ಬಾವಿ, ನೀರಾವರಿ ವಿಧಾನ ಕೂಡ ವಿಶೇಷ. ಮುಂಜಾನೆ ಇಬ್ಬನಿ, ತರಕಾರಿ ಎಲೆಯಲ್ಲಿ ಬಿದ್ದು ಒಣಗಿದರೆ ಬೆಳೆಗೆ ಸಮಸ್ಯೆ. ಮುಂಜಾವು ಅದಕ್ಕೆ ನಾಲ್ಕು ಗಂಟೆಗೆ ಎದ್ದು ಬಿಂದಿಗೆಯಲ್ಲಿ ನೀರುಣಿಸಬೇಕು. ಅರೇ ಅಷ್ಟು ಬೇಗ ಎದ್ದು ಕೆಲಸ ಮಾಡ್ತಾರಾ? ಕೇಳಬೇಡಿ .ಇವರು ನಿದ್ದೆ ಯಾವಾಗ ಮಾಡ್ತಾರೆ ಎಂಬುದು ನೀವೇ ಯೋಚಿಸಿ. ಮಧ್ಯಾನ್ಹ ನಾಲ್ಕು ಗಂಟೆಗೆ ಕೊಯ್ಲು...
ನಿಪುಣತೆ ಹೊಂದಿದ ಕೃಷಿಕಾರ್ಮಿಕರ ಕೊರತೆ ಭಾರತದಲ್ಲಿ ಮಾತ್ರವಲ್ಲ ; ಜಗತ್ತಿನಾದ್ಯಂತ ಇದೆ. ಇದರಿಂದಾಗುತ್ತಿರುವ ಸಮಸ್ಯೆ ಹಲವಾರು. ಇದರಿಂದ ಕೃಷಿ ದುಬಾರಿಯಾಗಿದೆ. ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿವಿಜ್ಞಾನಿಗಳು, ತಂತ್ರಜ್ಞರು ಶ್ರಮಿಸುತ್ತಲೇ ಇದ್ದಾರೆ. ಇವರ ಪರಿಶ್ರಮದಿಂದ ಸಾಕಷ್ಟು ಕೃಷಿ ಯಂತ್ರೋಪಕರಣಗಳು ಬಳಕೆಗೆ ದೊರೆತಿವೆ. ಇದೀಗ ಬಹು ನಿಖರವಾಗಿ ಕಾರ್ಯ ನಿರ್ವಹಿಸುವ ರೋಬೋಟ್ ಗಳು ಬಂದಿವೆ. ಆಹಾರ ಉತ್ಪಾದನೆ ಚಿಂತೆ ಪರಿಹಾರ ಈ ಯಂತ್ರಮಾನವರು (ರೋಬೋಟ್ ಗಳು) ಕಾರ್ಯ ನಿರ್ವಹಿಸುವ ರೀತಿಯನ್ನು ಕಂಡವರು ಇವುಗಳನ್ನು ಆಹಾರದ ಉತ್ಪಾದನೆ ಚಿಂತೆ ಪರಿಹರಿಸುವ ಸಾಧನಗಳೆಂದೇ ಕರೆದಿದ್ದಾರೆ. ಎಕೆಂದರೆ ಜಗತ್ತಿನ ಪ್ರತಿಯೊಂದು ದೇಶದ ಸರ್ಕಾರವೂ...
ಬೆಳೆಗಳನ್ನು ಉತ್ತಮವಾಗಿ ಬೆಳೆದು, ಅತ್ಯುತ್ತಮ ಇಳುವರಿ ಪಡೆಯಲು ಪ್ರತಿಯೊಬ್ಬ ಕೃಷಿಕರೂ ಶ್ರಮಿಸುತ್ತಾರೆ. ಇದಕ್ಕಾಗಿ ಸಮಯ, ಶ್ರಮ, ಹಣ ವಿನಿಯೋಗಿಸುತ್ತಾರೆ. ಇವರು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಾದ ಅತಿವೃಷ್ಟಿ-ಅನಾವೃಷ್ಟಿಗಳಿಂದಲೂ ಬೆಳೆ ಹಾಳಾಗುತ್ತದೆ. ಇದನ್ನು ಹೊರತುಪಡಿಸಿದ ಸಂದರ್ಭಗಳಲ್ಲಿಯೂ ನಿರೀಕ್ಷಿತ ಪ್ರಮಾಣದ ಇಳುವರಿ ದೊರೆಯದಿದ್ದರೆ ಅದು ತೀವ್ರವಾಗಿ ಚಿಂತಿಸಿ, ಸೂಕ್ತಕ್ರಮ ತೆಗೆದುಕೊಳ್ಳಬೇಕಾದ ಸಂಗತಿ. ಯಾವುದೇ ಬೆಳೆಗಳನ್ನು ಬೆಳೆಯುವ ಮುನ್ನ ಮಣ್ಣಿನ ಗುಣಧರ್ಮ ಅದರ ರಸಸಾರದ ಮಟ್ಟ ತಿಳಿಯುವುದು ಅತ್ಯಗತ್ಯ. ಮಣ್ಣಿನಲ್ಲಿ ಯಾವ ಬಗೆಯ ಪೋಷಕಾಂಶಗಳಿವೆ, ಯಾವುದರ ಕೊರತೆ ಇದೆ ಎಂದು...
ಜೇನುತುಪ್ಪಕ್ಕಾಗಿ ಮಾತ್ರ ಜೇನು ಸಾಕಾಣಿಕೆ ಮಾಡಲಾಗುತ್ತದೆ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಜೇನು ಸಾಕಾಣಿಕೆ ಕಾರ್ಯ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಕೃಷಿಗೆ ಇದರಿಂದಾಗುವ ಅನುಕೂಲ ಅಪರಿಮಿತ. ಅದರಲ್ಲೂ ಕೃಷಿಕರಿಗೆ ಇದೊಂದು ವರದಾನ. ಜೇನುಸಾಕಣೆಯನ್ನು ಕೈಗೊಳ್ಳುವುದರಿಂದ ಉಪಕಸುಬು ಆದಂತೆ ಆಗುತ್ತದೆ. ಜೊತೆಗೆ ಹೆಚ್ಚಿನ ಆದಾಯವೂ ದೊರೆಯುತ್ತದೆ. ಜೇನುಹುಳುಗಳು ಇರುವ ಪರಿಸರದಲ್ಲಿ ಇಳುವರಿ ಹೆಚ್ಚಾಗುವ ಲಾಭವೂ ಕೃಷಿಕರಿಗೆ ದೊರೆಯುತ್ತದೆ. ಅಲ್ಲದೇ ಜೇನು ಪರಾಗಸ್ಪರ್ಶ ಕ್ರಿಯೆ ಆಗಿರುವ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಬೆಳೆದ ಕೃಷಿ ಉತ್ಪನ್ನಗಳಿಗೆ ತಾಳಿಕೆ ಅವಧಿಯೂ ಹೆಚ್ಚು. ಜೇನುಹುಳುಗಳಿಗೆ ಹೂಗಳ ಪರಾಗ ಮುಖ್ಯವಾದ ಆಹಾರ...
ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಯಾವಾಗಲೂ ಅಪಾಯಕಾರಿ. ಒಂದೇ ಬೇಳೆ ಹಾಕುವ ಬದಲು ಎರಡು ಅಥವಾ ಹೆಚ್ಚು ಬೆಳೆಗಳನ್ನು ಹಾಕುವುದು ಸೂಕ್ತ. ಇವುಗಳಲ್ಲಿ ಯಾವುದೇ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಕೈ ಹಿಡಿಯುತ್ತವೆ. ರೈತರು ನಷ್ಟಕ್ಕೀಡಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಪೂರಕ ಬೆಳೆಗಳ ಬಗ್ಗೆ, ಅವುಗಳ ಪದ್ಧತಿಗಳ ಬಗ್ಗೆ ಕೃಷಿ ವಿಜ್ಙಾನಿಗಳು ಸಂಶೋಧನೆ ಮಾಡಿದ್ದಾರೆ. ಒಣಬೇಸಾಯದ  ತಾಂತ್ರಿಕತೆಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಒಣಬೇಸಾಯದ  ತಾಂತ್ರಿಕತೆಗಳನ್ನು, ಪದ್ಧತಿಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಇವರು ಅಭಿವೃದ್ಧಿಪಡಿಸಿದ ಬೆಳೆ ಪದ್ಧತಿಗಳನ್ನು ಅನುಸರಿಸುವುದು ಕೃಷಿಕರ ಆರ್ಥಿಕ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಅನುಕೂಲಕರ....
ನನ್ನ ಪೂರ್ಣ ಹೆಸರು ಮೈತ್ರಿ ಶಂಕರ್. ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದಿದ್ದು , ಮಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ. ಮದುವೆ ಆದ ಮೇಲೆ 15 ವರ್ಷ ಯುಎಸ್ ನಲ್ಲಿ ಇದ್ದೆವು. ಬೆಂಗಳೂರಿಗೆ ಹಿಂದಿರುಗಿ 10 ವರ್ಷವಾಗಿದೆ. ಪ್ರಸ್ತುತ ಆ್ಯಸ್ಟರ್ ಸಿಎಂಐ ಹೆಬ್ಬಾಳದಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಮೆಡಿಸಿನ್, ಕ್ಯಾನ್ಸರ್, ಹಾರ್ಟ್ ಡಿಸೀಸ್ ರೇಡಿಯೋಲಜಿ ವೈದ್ಯೆ. ನ್ಯೂಕ್ಲಿಯರ್ ಮೆಡಿಸನ್ ವಿಭಾಗದ ನೇತೃತ್ವ ವಹಿಸಿದ್ದೇನೆ. ತೋಟಗಳೆಂದರೆ ಯಾವಾಗಲೂ ಪ್ರೀತಿ. ಅಮರಿಕಾದಲ್ಲಿ ಇದ್ದಾಗಲೂ ವಿಶಾಲವಾಗಿದ್ದ ಮನೆ ಆವರಣದಲ್ಲಿ ತೋಟಗಾರಿಕೆ ಮಾಡುತ್ತಿದ್ದೆ. ಬೆಂಗಳೂರಿಗೆ ಬಂದಮೇಲೆ ಟೆರಸ್ ಗಾರ್ಡನಿಂಗ್ ಮಾಡುತ್ತಿದ್ದೆ. ಮನೆಕಟ್ಟಿದ ಮೇಲೆ ಸಾಕಷ್ಟು ಜಾಗ...
ಜಗತ್ತಿನ ಶಕ್ತಿಯೇ ಸೂರ್ಯಕಿರಣ, ಇದರ ಕಾಸ್ಮಿಕ್ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಕೃಷಿಯಲ್ಲಿ ಇದರ ಸದುಪಯೋಗ ಬಹುಮಹಡಿ ಪದ್ದತಿಯಿಂದ ದೊರೆಯುತ್ತದೆ. ಎಲ್ಲ ಗಿಡಮರಗಳಿಗೂ ಒಂದೇ ಪ್ರಮಾಣದ ಸೂರ್ಯಶಕ್ತಿ ಆಗತ್ಯ ಇರುವುದಿಲ್ಲ ಕೆಲವಕ್ಕೆ ಹೆಚ್ಚು; ಕೆಲವಕ್ಕೆ ಕಡಿಮೆ ಬೇಕಾಗುತ್ತದೆ. ಅನಾದಿ ಕಾಲದಿ೦ದಲೂ ಭಾರತೀಯ ಕೃಷಿಕರು ಇವುಗಳನ್ನೆಲ್ಲ ಅಧ್ಯಯನ ಮಾಡಿ, ಬಹುಮಹಡಿ ಕೃಷಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಮಲೆನಾಡಿನಲ್ಲಿ ಬಹಳ ಉತ್ತಮವಾಗಿ ಬರುವಂಥವು ಅಡಿಕೆ, ಬಾಳೆ, ಕರಿಮೆಣಸು, ಏಲಕ್ಕಿ ಮತ್ತು ಕೆಲವು ಔಷಧ ಸಸ್ಯಗಳಾದ ಪಚೋಲಿ,...
Rats and big rats are basically suspicious animals. Strong smelling poisons are quickly detected and avoided. That is why chemical poisons used to kill rats are not very successful. Instead of this, manure plant can be used to effectively control rat infestations. Gliricidia alfalfa is familiar to all farmers. It is called Gobarada gida. In fact, this plant was used...

Recent Posts